Select Your Language

Notifications

webdunia
webdunia
webdunia
webdunia

ಕೇರಳದ ಅಭಿವೃದ್ಧಿಗೆ ಜನತೆ ಮತ ನೀಡಿದ್ದಾರೆ: ಯೆಚೂರಿ

ಕೇರಳ
ಕೋಲ್ಕತಾ , ಗುರುವಾರ, 19 ಮೇ 2016 (17:00 IST)
ಕೇರಳದ ಜನತೆ ಅಭಿವೃದ್ಧಿಗಾಗಿ ಎಲ್‌ಡಿಎಫ್‌ಗೆ ಮತ ನೀಡಿದ್ದಾರೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.
 
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ರಾಜ್ಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುವುದಲ್ಲದೇ ಪಶ್ಚಿಮ ಬಂಗಾಳದ ಮತದಾರರ ತೀರ್ಪನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.
 
ಸಿಪಿಎಂ ಮೇಲೆ ಭರವಸೆಯಿಟ್ಟ ಕೇರಳದ ಜನತೆಗೆ ಧನ್ಯವಾದಗಳು. ಜನತೆಯ ಆಶೋತ್ತರಗಳ ಈಡೇರಿಕೆಗೆ ಸರಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
 
ಕೇರಳದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ನಾಯಕನ ಬಗ್ಗೆ ಕೇಂದ್ರ ಪಾಲಿಟ್‌ಬ್ಯೂರೋ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಿಪಿಎ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ತಿಳಿಸಿದ್ದಾರೆ.

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 
ಕೇರಳ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2016, ಸೀತಾರಾಮ್ ಯಚೂರಿ,kerala, west bengal assembly election 2016, sitaram yechuri,

Share this Story:

Follow Webdunia kannada

ಮುಂದಿನ ಸುದ್ದಿ

ಪುದುಚೆರಿಯಲ್ಲಿ ಕಾಂಗ್ರೆಸ್-ಡಿಎಂಕೆ ಸ್ಪಷ್ಟ ಬಹುಮತ, ಸರ್ಕಾರ ರಚಿಸಲು ಸಿದ್ಧತೆ