Select Your Language

Notifications

webdunia
webdunia
webdunia
webdunia

ಬಜೆಟ್ ನವಭಾರತದ ದೃಷ್ಟಿಕೋನ : ಯೋಗಿ ಆದಿತ್ಯನಾಥ್

ಬಜೆಟ್ ನವಭಾರತದ ದೃಷ್ಟಿಕೋನ : ಯೋಗಿ ಆದಿತ್ಯನಾಥ್
ಲಕ್ನೋ , ಗುರುವಾರ, 2 ಫೆಬ್ರವರಿ 2023 (09:42 IST)
ಲಕ್ನೋ : 2023-24ರ ಕೇಂದ್ರ ಬಜೆಟ್ ನವ ಭಾರತದ ದೃಷ್ಟಿಕೋನವನ್ನು ಹೊಂದಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಇದು ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಆಗಿದೆ. ಕೇಂದ್ರ ಬಜೆಟ್ ಕುರಿತು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.

ಟ್ವೀಟ್ನಲ್ಲಿ ಏನಿದೆ?

ಬಜೆಟ್ನಲ್ಲಿ ನವ ಭಾರತ, ದೇಶದ ಸಮೃದ್ಧಿಯ ದೃಷ್ಟಿಕೋನ ಹಾಗೂ 130 ಕೋಟಿ ಭಾರತೀಯರಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ. ಬಜೆಟ್ ಬಡವರು, ರೈತರು, ಯುವಕರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ನಿರೀಕ್ಷೆಗಳು ಹಾಗೂ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಎಂದು ತಿಳಿಸಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಬಂಪರ್ – ಏನಿದು ಯೋಜನೆ?