Viral Video: ವಕ್ಫ್ ಹಿಂಸಾಚಾರದಿಂದ ಗ್ರಾಮ ಬಿಟ್ಟು ಓಡುತ್ತಿರುವ ಹಿಂದೂಗಳು: ಇದು ಭಾರತ, ಬಾಂಗ್ಲಾ ಅಲ್ಲ

Krishnaveni K
ಭಾನುವಾರ, 13 ಏಪ್ರಿಲ್ 2025 (18:35 IST)
Photo Credit: X
ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಮುಸ್ಲಿಮರ ಪ್ರತಿಭಟನೆಗೆ ಬೆಚ್ಚಿ ಹಿಂದೂಗಳು ಗ್ರಾಮ ಬಿಟ್ಟು ಗುಂಪು ಗುಂಪಾಗಿ ಓಡುವಂತಾಗಿದೆ. ಈ ವಿಡಿಯೋಗಳು ಈಗ ವೈರಲ್ ಆಗಿದೆ.

ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ನಲ್ಲಿ ಹಿಂದೂಗಳು ಗುಂಪು ಗುಂಪಾಗಿ ತೆರಳುತ್ತಿರುವ ಮತ್ತು ನಿರಾಶ್ರಿತರಾಗಿ ಒಂದು ಕಡೆ ಗುಂಪು ಸೇರಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನು ನೋಡಿ ಇದೇನು ಭಾರತವೋ, ಬಾಂಗ್ಲಾದೇಶವೋ ಎಂದು ಜನ ಅನುಮಾನ ಪಡುವಂತಾಗಿದೆ. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ನಡೆದಿತ್ತು. ಈಗ ಅದೇ ದೃಶ್ಯ ಭಾರತದಲ್ಲೇ ಕಂಡುಬರುತ್ತಿರುವುದು ವಿಪರ್ಯಾಸವಾಗಿದೆ.

ಹಿಂದೂಗಳ ವಾಹನಗಳನ್ನು ಜಖಂಗೊಳಿಸುವುದು, ಸರ್ಕಾರೀ ಕಚೇರಿಗಳ ಮೇಲೆ ಕಲ್ಲೆಸೆದು ದಾಂಧಲೆ ನಡೆಸಲಾಗುತ್ತಿದೆ. ಇದಕ್ಕೆಲ್ಲಾ ಆಡಳಿತಾರೂಢ ಟಿಎಂಸಿಯೇ ಬೆಂಬಲ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯಸಭಾ ಸದಸ್ಯರ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ, ನಿವಾಸಿ ಹೇಳಿದ್ದೇನು

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಮತ್ತಿಬ್ಬರ ಬಂಧನ

ಮೊದಲ ಬಾರಿ ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಪತ್ನಿ

ಸರ್ಕಾರಿ ನೌಕರರ ಸಾವಿಗೆ ಸಿದ್ದರಾಮಯ್ಯ ರಾಜೀನಾಮೆಯೇ ಪ್ರಾಯಶ್ಚಿತ: ಸಿಟಿ ರವಿ

ಗೃಹಲಕ್ಷ್ಮಿ ಹಣ ಬಂದಿಲ್ಲ ಸಾರ್ ಎಂದು ನಾಟಕವಾಡಿದ ಮಹಿಳೆ: ಡಿಕೆ ಶಿವಕುಮಾರ್ ಮಾಡಿದ್ದೇನು

ಮುಂದಿನ ಸುದ್ದಿ
Show comments