Publish Date: Thu, 12 Feb 2026 (11:30 IST)
Updated Date: Thu, 12 Feb 2026 (11:40 IST)
ದೆಹಲಿ: ರೈಲನ್ನೇ ಈ ವ್ಯಕ್ತಿ ಬಾರ್ ಎಂದುಕೊಂಡಿದ್ದಾನೇನೋ. ಬಿಂದಾಸ್ ಆಗಿ ವ್ಯಕ್ತಿಯೊಬ್ಬ ರೈಲಿನಲ್ಲಿ ಮದ್ಯ ಸೇವಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ರೈಲಿನಲ್ಲಿ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮೊನ್ನೆಯಷ್ಟೇ ಪೊಲೀಸ್ ಅಧಿಕಾರಿಯೊಬ್ಬರು ರೈಲಿನಲ್ಲಿ ಶೇಂಗಾ ತಿಂದು ಅಲ್ಲೇ ಸಿಪ್ಪೆ ಬಿಸಾಡುವ ವಿಡಿಯೋವೊಂದು ವೈರಲ್ ಆಗಿತ್ತು.
ಇದೀಗ ವ್ಯಕ್ತಿಯೊಬ್ಬ ರೈಲಿನ ಅಪ್ಪರ್ ಬರ್ತ್ ಸ್ಲೀಪರ್ ಸೀಟ್ ನಲ್ಲಿ ಕೂತು ಬಾಟಲಿಯಿಂದ ಮದ್ಯ ಗ್ಲಾಸ್ ಗೆ ಹಾಕಿಕೊಂಡು ಬಿಂದಾಸ್ ಆಗಿ ಸೇವಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಈ ವ್ಯಕ್ತಿಯ ವಿರುದ್ಧ ಕ್ರಮವಾಗಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.
ಗೋರಖ್ ಪುರದಿಂದ ದೆಹಲಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಈ ಘಟನೆ ನಡೆದಿದೆ. ಈ ರೀತಿ ಮದ್ಯ ಸೇವನೆ ಮಾಡುವುದು ಸಹ ಪ್ರಯಾಣಿಕರಿಗೂ ಕಿರಿ ಕಿರಿ. ಇಂತಹ ವ್ಯಕ್ತಿಗಳ ವಿರುದ್ಧ ರೈಲ್ವೇ ತಕ್ಕ ಕ್ರಮ ಕೈಗೊಳ್ಳಬೇಕು.