Publish Date: Thu, 18 Jun 2026 (15:20 IST)
Updated Date: Thu, 18 Jun 2026 (15:24 IST)
ಮಗುವೊಂದು ತನ್ನ ತಾಯಿಯ ದುಬಾರಿ ಐಫೋನ್ ಅನ್ನು ನೇರವಾಗಿ ಕೆರೆಗೆ ಎಸೆದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಕುಟುಂಬವೊಂದು ಸರೋವರ ಅಥವಾ ಕೆರೆಯಲ್ಲಿ ಸ್ಪೀಡ್ ಬೋಟ್ ಅಥವಾ ಮೋಟಾರ್ ಬೋಟ್‌ನಲ್ಲಿ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ತಾಯಿ ಬೋಟ್‌ನ ಸೀಟಿನಲ್ಲಿ ಕುಳಿತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿರುತ್ತಾರೆ. ಈ ಸಮಯದಲ್ಲಿ ಅವರ ಪಕ್ಕದಲ್ಲೇ ನಿಂತಿರುವ ಸಣ್ಣ ಮಗುವಿನ ಕೈಗೆ ಐಫೋನ್ ಸಿಗುತ್ತದೆ. ಆ ಮಗು ಫೋನ್‌ನ ಬೆಲೆ ಅಥವಾ ಅದರ ಮಹತ್ವದ ಅರಿವಿಲ್ಲದೆ, ಆಟವಾಡುತ್ತಾ ಒಮ್ಮಿಂದೊಮ್ಮೆಗೇ ಆ ಫೋನ್ ಅನ್ನು ವೇಗವಾಗಿ ಚಲಿಸುತ್ತಿದ್ದ ಬೋಟ್‌ನಿಂದ ಕೆರೆಯ ನೀರಿಗೆ ಎಸೆದುಬಿಡುತ್ತದೆ.
ಮಗು ಫೋನ್ ಎಸೆದ ತಕ್ಷಣ ತಾಯಿ ಅದನ್ನು ತಡೆಯಲು ಪ್ರಯತ್ನಿಸುತ್ತಾರಾದರೂ ಅಷ್ಟರಲ್ಲೇ ಫೋನ್ ನೀರು ಪಾಲಾಗಿರುತ್ತದೆ. ಕಣ್ಣೆದುರೇ ದುಬಾರಿ ಮೊಬೈಲ್ ಕೈಬಿಟ್ಟು ಹೋದಾಗ ಆ ತಾಯಿ ದಿಕ್ಕೇ ತೋಚದಂತೆ ಶಾಕ್‌ನಲ್ಲಿ ಮುಖ ಮುಚ್ಚಿಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರಿಂದ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಇದಕ್ಕೇ ಹೇಳುವುದು ಮಕ್ಕಳ ಕೈಗೆ ದುಬಾರಿ ವಸ್ತುಗಳನ್ನು ಕೊಡಬಾರದು ಎಂದು ಎಂದು ಕೆಲವರು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಐಫೋನ್ ವಾಟರ್ ಪ್ರೂಫ್ ಆಗಿದ್ದರೂ ಇಷ್ಟು ಆಳವಾದ ಕೆರೆಯಿಂದ ಅದನ್ನು ಮರಳಿ ಪಡೆಯುವುದು ಅಸಾಧ್ಯ ಎಂದು ಲೇವಡಿ ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ