ಇಂಧೋರ್: ಹಾಡ ಹಗಲೇ ಚಿರತೆಯೊಂದು ಮನೆಯೊಳಗೆ ಬಂದು ಕುಳಿತರೆ ಏನಾಗಬೇಡ? ಇಂಧೋರ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು ಜನ ಎದ್ನೋ ಬಿದ್ನೋ ಎಂದು ಓಡಿರುವ ವಿಡಿಯೋ ವೈರಲ್ ಆಗಿದೆ.
ಇಂಧೋರ್ ನ ದೇವಗುರಾಡಿಯಾದಲ್ಲಿ ಚಿರತೆಯೊಂದು ಮನೆಯೊಳಗೆ ಬಂದು ಕುಳಿತಿತ್ತು. ಮನೆಯ ಮೆಟ್ಟಿಲಿನ ಮೇಲೆ ಚಿರತೆ ಅಡಗಿ ಕುಳಿತಿದ್ದು ನೋಡಿ ಸುತ್ತಮುತ್ತಲ ಮನೆಯವರೆಲ್ಲಾ ಗಾಬರಿ ಬಿದ್ದಿದ್ದರು. ಜನರ ಕಿರುಚಾಟ ಕೇಳಿ ಚಿರತೆಯೂ ಗಾಬರಿಯಾಗಿತ್ತು.
ಜನ ತನಗೇನು ಮಾಡುವರೋ ಎಂದು ಚಿರತೆ, ಚಿರತೆ ತಮಗೇನು ಮಾಡೀತೋ ಎಂದು ಜನ ಓಡಿದ್ದೋ ಓಡಿದ್ದು. ಜನರ ಕಿರುಚಾಟದಿಂದ ಗಾಬರಿಯಾದ ಚಿರತೆ ಮಹಡಿಯ ಮೇಲೆ ಓಡಿ ಹೋದರೆ ಅಲ್ಲಿಯೂ ಜನ ಓಡಿಸಲು ನೋಡಿದ್ದರಿಂದ ನೇರವಾಗಿ ಟೆರೇಸ್ ನಿಂದ ರಸ್ತೆ ಜಿಗಿದು ಓಡಿತು.
ಚಿರತೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಕೊನೆಗೂ ಕಲೆಕ್ಟ್ ಆದೇಶದ ಮೇರೆಗೆ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.