Select Your Language

Notifications

webdunia
webdunia
webdunia
webdunia

ಎಮ್ಮೆ ಕದ್ದಿದ್ದಕ್ಕೆ ಬಾಲಕನ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದರು

Villagers
ಆಗ್ರಾ , ಶುಕ್ರವಾರ, 23 ಸೆಪ್ಟಂಬರ್ 2016 (14:25 IST)
ಎಮ್ಮೆಯನ್ನು ಕದ್ದ ಕಾರಣಕ್ಕೆ 16 ವರ್ಷದ ದಲಿತ ಬಾಲಕನನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ದೌರ್ಜನ್ಯ ನಡೆಸಿದ ಖಂಡನೀಯ ಘಟನೆ ಆಗ್ರಾ ಜಿಲ್ಲೆಯ ಬಸ್ ಕೇಸಿ ನಗರದಲ್ಲಿ ನಡೆದಿದೆ. 

ಸುಮಾರು 15 ಜನರಿದ್ದ ಮೇಲ್ವರ್ಗದ ಗುಂಪು ನಮ್ಮ ಮನೆಗೆ ನುಗ್ಗಿ ಬಾಲಕನನ್ನು ಎಳೆದೊಯ್ದು ಕಪಾಳಕ್ಕೆ ಬಾರಿಸತೊಡಗಿದರು. ಬಳಿಕ ಆತನನ್ನು ಮರಕ್ಕೆ ಕಟ್ಟಿ ಹಾಕಿ ಪ್ರಜ್ಞೆ ಕಳೆದುಕೊಳ್ಳುವವರೆಗೆ ಥಳಿಸಲಾಯಿತು. ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದಿದ್ದಲ್ಲದೇ ಆತನ ದೇಹದಲ್ಲಿ ವಿಷಯುಕ್ತ ಪದಾರ್ಥವನ್ನು ಇಂಜೆಕ್ಟ್ ಮಾಡಲು ಪ್ರಯತ್ನಿಸಲಾಯಿತು. ಅದೃಷ್ಟವಶಾತ್ ಹಳ್ಳಿಯ ಜನರು ಆತನನ್ನು ರಕ್ಷಿಸಿದರು ಎಂದು ಪೀಡಿತನ ಕುಟುಂಬ ದೂರಿದೆ. 
 
ಬಾಲಕನನ್ನು ಎಸ್.ಎನ್ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ. 
 
ಐವರು ಆರೋಪಿಗಳನ್ನು ಗುರುತಿಸಲಾಗಿದ್ದು ಅವರ ವಿರುದ್ಧ ಐಪಿಸಿ ವಿಭಾಗ 352ರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನುಳಿದ ಆರೋಪಿಗಳನ್ನು ಗುರುತಿಸಬೇಕಿದೆ. ವೈದ್ಯಕೀಯ ವರದಿ ಕೈಗೆ ಬಂದ ಮೇಲೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೆಲ, ಜಲ, ಭಾಷೆಯ ವಿಷಯದಲ್ಲಿ ಒಗ್ಗಟ್ಟು ಅಗತ್ಯ: ಸಚಿವ ಪಾಟೀಲ್