Select Your Language

Notifications

webdunia
webdunia
webdunia
webdunia

ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ವಿಜಯ್ ಮಲ್ಯ

Vijay Mallya
ನವದೆಹಲಿ , ಸೋಮವಾರ, 2 ಮೇ 2016 (19:15 IST)
ಒಂಬತ್ತು ಸಾವಿರ ಕೋಟಿ ರೂ.ಗಳ ಬ್ಯಾಂಕ್‌ ಸಾಲ ಮರಳಿಸದೆ ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯ ದೊರೆ ವಿಜಯ್‌ ಮಲ್ಯ ಅವರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.

ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿದ್ದ ಅವರ ಸದಸ್ಯತ್ವ ಜೂನ್ 30 ರಂದು ಕೊನೆಗೊಳ್ಳಲಿತ್ತು. ಆದರೆ ರಾಜ್ಯಸಭೆ ನೀತಿ ಸಮಿತಿ ಅವರ ಉಚ್ಛಾಟನೆಗೆ ಶಿಫಾರಸ್ಸು ಮಾಡಿತ್ತು. ಸಂಸತ್ತಿನ ನೀತಿ ಸಮಿತಿಗೆ ತಾನು ಉತ್ತರ ನೀಡಬೇಕಾಗಿದ್ದ ಗಡುವಿಗೆ ಒಂದು ದಿನದ ಮೊದಲು ಮಲ್ಯ ರಾಜೀನಾಮೆ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಕುರಿತು ನೀತಿ ಸಮಿತಿಗೆ ಅವರು ಮಾಹಿತಿ ನೀಡಿದ್ದಾರೆ. 
 
ಮಲ್ಯ ಅವರ ಅವರ ಪಾಸ್‌ ಪೋರ್ಟ್‌ ರದ್ದಾಗಿದ್ದು  ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಬ್ರಿಟನ್‌ ಸರಕಾರಕ್ಕೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂಟೆಕ್ಸ್ ಆಕ್ವಾ ಲಯನ್ಸ್ 3ಜಿ ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಗೆ ಬಿಡುಗಡೆ