Daily Horoscope

Select Your Language

Notifications

webdunia
webdunia
webdunia
webdunia

ಸಂಸತ್ ಮುಂದೆ ಚಹಾ, ಬಿಸ್ಕತ್ ಸೇವಿಸುತ್ತಾ ಎಲ್ ಪಿಜಿ ಅಭಾವದ ವಿರುದ್ಧ ರಾಹುಲ್ ಗಾಂಧಿ ಧರಣಿ Video

Rahul Gandhi drinking tea
ನವದೆಹಲಿ: ಸಂಸತ್ ಭವನದ ಮುಂಭಾಗ ವಿಪಕ್ಷ ಸದಸ್ಯರೊಂದಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಚಹಾ, ಬಿಸ್ಕತ್ ಸೇವಿಸುತ್ತಾ ದೇಶದಲ್ಲಿ ಎಲ್ ಪಿಜಿ ಸಿಲಿಂಡರ್ ಅಭಾವದ ವಿರುದ್ದ ಪ್ರತಿಭಟನೆ ನಡೆಸಿದರು.

ಇಂದು ಸಂಸತ್ ಕಲಾಪಕ್ಕೆ ಮುನ್ನ ಎಲ್ ಪಿಜಿ ಅಭಾವ ಸೃಷ್ಟಿಯಾಗಿರುವುದರ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ರಾಹುಲ್ ಗಾಂಧಿ ಬಳಿಕ ಸಂಸತ್ ಭವನದ ಹೊರಗೆ ವಿಪಕ್ಷ ಸದಸ್ಯರೊಂದಿಗೆ ಧರಣಿ ಕೂತಿದ್ದಾರೆ.

ಮುಂದೆ ಎಲ್ ಪಿಜಿ ಅಭಾವದಿಂದ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನಾನು ಈ ಬಗ್ಗೆ ಸಂಸತ್ ಒಳಗೆ ಮಾತನಾಡಲು ಹೊರಟರೆ ಅವಕಾಶ ಕೊಡಲಿಲ್ಲ ಎಂದಿದ್ದಾರೆ.

ಇನ್ನು ಸಂಸತ್ ಭವನದ ಮೆಟ್ಟಿಲುಗಳ ಮೇಲೆ ಧರಣಿ ಕೂತಿದ್ದ ವಿಪಕ್ಷ ಸದಸ್ಯರಿಗೆ ಚಹಾ, ಬಿಸ್ಕತ್ ಸರಬರಾಜು ಆಗಿದೆ. ರಾಹುಲ್ ಕೂಡಾ ಸಹ ಸದಸ್ಯರೊಂದಿಗೆ ಕೂತು ಚಹಾ ಸವಿದಿದ್ದಾರೆ. ಎಲ್ ಪಿಜಿ ಅಭಾವದ ಬಗ್ಗೆ ವಿಪಕ್ಷ ಸದಸ್ಯರು ಬಿತ್ತಿಪತ್ರಗಳನ್ನೂ ಪ್ರದರ್ಶಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಅತೀ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿಸಿದೆ ಸರ್ಕಾರ: ಬಿವೈ ವಿಜಯೇಂದ್ರ