Select Your Language

Notifications

webdunia
webdunia
webdunia
webdunia

ಅಸ್ಸಾಂನಲ್ಲಿ ಚಹಾ ಎಲೆ ಕಿತ್ತ ಪ್ರಧಾನಿ ಮೋದಿ, ಕಾರ್ಮಿಕರೊಂದಿಗೆ ಸೆಲ್ಫೀ: Video

PM Modi in Assam
Photo Credit: X
ಗುವಾಹಟಿ: ಅಸ್ಸಾಂನ ದಿಬ್ರುಗಢ ಜಿಲ್ಲೆಯ ಚಹಾ ತೋಟದಲ್ಲಿ ಮಹಿಳಾ ಕಾರ್ಮಿಕರೊಂದಿಗೆ ಎಲೆ ಕಿತ್ತ ಪ್ರಧಾನಿ ಮೋದಿ ಸೆಲ್ಫೀಗೆ ಪೋಸ್ ನೀಡಿದ್ದಾರೆ.

ಅಸ್ಸಾಂ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ಮೋದಿ ತೆರಳಿದ್ದರು. ಈ ವೇಳೆ ಪ್ರಚಾರ ರಾಲಿಯಲ್ಲಿ ಭಾಗಿಯಾದ ಮೋದಿ ಬಳಿಕ ಅಲ್ಲಿ ಟೀ ಎಸ್ಟೇಟ್ ಗೆ ಭೇಟಿ ನೀಡಿ ಕೆಲವು ಸಮಯ ಕಳೆದಿದ್ದಾರೆ. ಜೊತೆಗೆ ಮಹಿಳಾ ಕಾರ್ಮಿಕರ ಜೊತೆ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಅವರು ಚಹಾ ತೋಟ ಹೊಂದಿರುವ ಕುಟುಂಬಗಳ ಪ್ರಯತ್ನದ ಬಗ್ಗೆ ನನಗೆ ಹೆಮ್ಮೆಯಿದೆ. ಅವರ ಕಠಿಣ ಪರಿಶ್ರಮವು ಅಸ್ಸಾಂ ಘನತೆಯನ್ನು ಹೆಚ್ಚಿಸಿದೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಮಹಿಳಾ ಕಾರ್ಮಿಕರೊಂದಿಗೆ ಸೇರಿಕೊಂಡು ತಾವೂ ಚಹಾ ಎಲೆಗಳನ್ನು ಕಿತ್ತುಕೊಂಡ ಪ್ರಧಾನಿ ಮೋದಿ ಬಳಿಕ ಅವರೊಂದಿಗೆ ಸೆಲ್ಫೀಗೆ ಪೋಸ್ ನೀಡಿದ್ದಾರೆ. ಕಾರ್ಮಿಕರ ಕಷ್ಟಗಳನ್ನು ತಾಳ್ಮೆಯಿಂದ ಆಲಿಸಿ ಅಲ್ಲಿಂದ ತೆರಳಿದ್ದಾರೆ.

pic.twitter.com/8tTyjiTK0T

 

— Narendra Modi (@narendramodi) April 1, 2026

Share this Story:

Follow Webdunia kannada

ಮುಂದಿನ ಸುದ್ದಿ

ಗಾಯದ ಮೇಲೆ ಮತ್ತೆ ಬರೆ: ದ್ವಿಗುಣವಾದ ವಿಮಾನ ಇಂಧನ ದರ, ವಾಣಿಜ್ಯ ಸಿಲಿಂಡರ್‌ ಕೂಡ ತುಟ್ಟಿ