Publish Date: Fri, 16 Jan 2026 (11:55 IST)
Updated Date: Fri, 16 Jan 2026 (11:59 IST)
ಲಕ್ನೋ: ಆಡಳಿತದ ವಿಚಾರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಲ್ಲ. ಆದರೆ ಮಕ್ಕಳ ವಿಚಾರದಲ್ಲಿ ಅವರು ತಾವೇ ಮಗುವಾಗಿ ಬಿಡುತ್ತಾರೆ. ಇದೀಗ ಮಗುವೊಂದು ಸಿಎಂ ಯೋಗಿ ಬಳಿ ಚಿಪ್ಸ್ ಬೇಕೆಂದು ಬೇಡಿಕೆಯಿಟ್ಟ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಕ್ರಾಂತಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಗೋರಕ್ ಪುರದಲ್ಲಿ ನಡೆದ ಕಾರ್ಯಕ್ರಮ ಅದಾಗಿತ್ತು. ಸಾಕಷ್ಟು ಜನ ಮಕ್ಕಳೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಬಾಲಕನೊಬ್ಬನನ್ನು ಸಿಎಂ ಯೋಗಿ ಹತ್ತಿರ ಕರೆದು ಮಾತನಾಡಿಸಿದ್ದಾರೆ. ಮಕ್ಕಳಿಗೆ ಸಿಎಂ ಆದರೇನು, ಸಾಮಾನ್ಯರಾದರೇನು? ಆ ಬಾಲಕನೂ ಯಾರೋ ತನ್ನ ನೆಂಟರ ಬಳಿ ಕೇಳುವಂತೆ ನನಗೆ ಚಿಪ್ಸ್ ಬೇಕು ಎಂದು ಸಿಎಂ ಯೋಗಿ ಬಳಿ ಬೇಡಿಕೆಯಿಟ್ಟಿದ್ದಾನೆ.
ಬಾಲಕನ ಬೇಡಿಕೆ ಕೇಳಿ ಸಿಎಂ ಯೋಗಿಗೆ ನಗುವೋ ನಗು. ಬಳಿಕ ತಮ್ಮ ಆಪ್ತರ ಬಳಿ ಹೇಳಿ ಚಿಪ್ಸ್ ತರಿಸಿ ತಾವೇ ಹುಡುಗನಿಗೆ ತಿನಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.