Webdunia - Bharat's app for daily news and videos

Install App

ಚೇಷ್ಟೆ ಮಾಡಲು ಬಂದ ಕೋತಿ.. ಮೊಬೈಲ್ ನೋಡಿ ಫುಲ್ ಕಳೆದುಹೋಯ್ತು… ಫನ್ನಿ Video

ಕೃಷ್ಣವೇಣಿ ಕೆ
ಗುರುವಾರ, 13 ಆಗಸ್ಟ್ 2026 (10:34 IST)
ಪ್ರಾಣಿಗಳು ಮತ್ತು ಮಾನವರ ನಡುವಿನ ಬಾಂಧವ್ಯ ಹಾಗೂ ಹೊಂದಾಣಿಕೆಯನ್ನು ತೋರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಸದ್ದು ಮಾಡುತ್ತಿರುತ್ತವೆ. ಆದರೆ ಇಲ್ಲೊಂದು ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು, ಪ್ರಾಣಿಗಳಿಗೂ ಮಾನವರ ಆಧುನಿಕ ತಂತ್ರಜ್ಞಾನದ ಮೇಲೆ ಎಷ್ಟು ಕುತೂಹಲವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
 
ಆರಾಮಾಗಿ ಮಂಚದ (ಚಾರ್‌ಪಾಯ್) ಮೇಲೆ ಮಲಗಿ ಮೊಬೈಲ್ ಗೇಮ್ ಆಡುತ್ತಿದ್ದ ಬಾಲಕನ ಪಕ್ಕದಲ್ಲಿ ಕೋತಿಯೊಂದು ಬಂದು ಕುಳಿತು, ಮನುಷ್ಯರಂತೆಯೇ ಗೇಮ್ ವೀಕ್ಷಿಸಿರುವ ಅಪರೂಪದ ದೃಶ್ಯ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
 
 
ಸಾಮಾನ್ಯವಾಗಿ ಕೋತಿಗಳು ಪಕ್ಕದಲ್ಲಿ ಬಂದರೆ ಯಾವುದೇ ಮಗು ಅಥವಾ ದೊಡ್ಡವರು ಹೆದರಿ ಓಡುವುದು ಅಥವಾ ಕೋತಿಯನ್ನು ಬೆದರಿಸುವುದು ಸಹಜ. ಆದರೆ ಈ ವೀಡಿಯೋದಲ್ಲಿ ಬಾಲಕ ಸ್ವಲ್ಪವೂ ಹೆದರದೆ ತನ್ನಷ್ಟಕ್ಕೆ ತಾನು ಗೇಮ್ ಆಡುವುದನ್ನು ಮುಂದುವರಿಸಿದ್ದಾನೆ.
 
ಮತ್ತೊಂದೆಡೆ, ಕೋತಿಯು ಯಾವುದೇ ರೀತಿಯ ಚೇಷ್ಟೆ ಅಥವಾ ಹಾರಾಟ ನಡೆಸದೆ, ಅತ್ಯಂತ ಶಾಂತವಾಗಿ ಬಾಲಕನ ಪಕ್ಕದಲ್ಲೇ ಕುಳಿತುಕೊಂಡಿದೆ. ಬಾಲಕನ ಫೋನ್ ಸ್ಕ್ರೀನ್‌ನತ್ತಲೇ ಕಣ್ಣಿಟ್ಟಿದ್ದ ಕಪಿರಾಯ, ಗೇಮ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅತ್ಯಂತ ಏಕಾಗ್ರತೆ ಹಾಗೂ ಕುತೂಹಲದಿಂದ ವೀಕ್ಷಿಸಿದೆ. ಇದನ್ನು ನೋಡಿದ ಯಾರೇ ಆದರೂ 'ಇದು ಪ್ರಾಣಿಯೋ ಅಥವಾ ಗೇಮಿಂಗ್ ಪ್ರೇಮಿಯೋ?' ಎಂದು ಆಶ್ಚರ್ಯ ಪಡದಿರಲು ಸಾಧ್ಯವಿಲ್ಲ. ಪ್ರಾಣಿಗಳು ಮನುಷ್ಯರ ಜೀವನಶೈಲಿಗೆ ಎಷ್ಟು ಮುದ್ದಾಗಿ ಹೊಂದಿಕೊಳ್ಳುತ್ತವೆ ಎಂಬುದಕ್ಕೆ ಈ ವಿಡಿಯೋ ಅತ್ಯುತ್ತಮ ಉದಾಹರಣೆಯಾಗಿದೆ.
pic.twitter.com/bV1DUQO0NQ

 

— Ankit Yadav (@Ankit_Talkss) August 13, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಜ್ವಲ್ ರೇವಣ್ಣಗೆ ಜೈಲಲ್ಲಿ ಮೊಬೈಲ್, ಒಬ್ಬ ಸಹಾಯಕ.. ಏನಿದು ವೈಭೋಗ Video

ಅಮ್ಮ ಚಾಕಲೇಟ್ ಕದೀತಾಳೆ… ಅಮ್ಮನ ಮೇಲೆ ಕಂಪ್ಲೇಂಟ್ ಮಾಡಲು ಪೊಲೀಸ್ ಠಾಣೆ ಮೆಟ್ಟಿಲೇರಿದ 3 ರ ಪೋರ Video

ಕಾಡಿನ ರಸ್ತೆಯಲ್ಲಿ ಸ್ಕೂಟಿ ನಿಲ್ಲಿಸಿದ್ದ ಮಹಿಳೆ ಎರಡೆರಡು ಚಿರತೆ ಒಟ್ಟಿಗೆ ದಾಳಿ ಮಾಡಿದಾಗ ಅವುಗಳಿಗೇ ಶಾಕ್ ಕೊಟ್ಟಿದ್ದೇಗೆ Video

ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ: ತಮಿಳುನಾಡಿಗೆ ಬಸ್ ಸ್ಥಗಿತ

Karnataka Weather: ಕರ್ನಾಟಕ ಈ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ

ಮುಂದಿನ ಸುದ್ದಿ
Show comments