Publish Date: Wed, 12 Aug 2026 (09:33 IST)
Updated Date: Wed, 12 Aug 2026 (09:38 IST)
ಮಂಗಳೂರು (ಸುರತ್ಕಲ್): ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಯತಪ್ಪಿ ಹಳಿಯಡಿ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೊಂಕಣ ರೈಲ್ವೆಯ ಸಮಯಪ್ರಜ್ಞೆಯ ಪಾಯಿಂಟ್ಸ್‌ಮನ್ ಸಾಹಸಮಯವಾಗಿ ರಕ್ಷಿಸಿ, ಭಾರಿ ದುರಂತವನ್ನು ತಪ್ಪಿಸಿದ್ದಾರೆ.
ಸಮಯಪ್ರಜ್ಞೆ ಹಾಗೂ ಸಾಹಸ ಮೆರೆದ ಪಾಯಿಂಟ್ಸ್‌ಮನ್ ಸಂದೀಪ್ ನಾಯಕ್ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಕೊಂಕಣ ರೈಲ್ವೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು 10,000 ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಮಧ್ಯಾಹ್ನ ಸುಮಾರು 12:12 ರ ವೇಳೆಗೆ ಮಡಗಾಂವ್ - ಮಂಗಳೂರು ಸೆಂಟ್ರಲ್ ಎಮ್‌ಇಎಮ್‌ಯು ಎಕ್ಸ್‌ಪ್ರೆಸ್ ರೈಲು ನಿಲ್ದಾಣದಿಂದ ಹೊರಡುತ್ತಿದ್ದಾಗ, ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ ಪ್ಲಾಟ್‌ಫಾರ್ಮ್ ಹಾಗೂ ಬೋಗಿಯ ನಡುವಿನ ಆಳವಾದ ಗ್ಯಾಪ್‌ಗೆ ಜಾರಿ ಬೀಳಲು ತೊಡಗಿದ್ದಾನೆ.
ಅಲ್ಲೇ ಕರ್ತವ್ಯದಲ್ಲಿದ್ದ ಪಾಯಿಂಟ್ಸ್‌ಮನ್ ಸಂದೀಪ್ ನಾಯಕ್ ಅವರು ಪ್ರಯಾಣಿಕ ಅಪಾಯದಲ್ಲಿರುವುದನ್ನು ತಕ್ಷಣವೇ ಗಮನಿಸಿದ್ದಾರೆ. ಕ್ಷಣ ಮಾತ್ರವೂ ತಡಮಾಡದೆ ಮಿಂಚಿನ ವೇಗದಲ್ಲಿ ಓಡಿಬಂದ ಸಂದೀಪ್, ರೈಲಿನ ಅಡಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರಭಸವಾಗಿ ಹಿಂದೆ ಎಳೆದು ಆತನ ಪ್ರಾಣ ಕಾಪಾಡಿದ್ದಾರೆ.
ಸಂದೀಪ್ ನಾಯಕ್ ಅವರ ಈ ಸಕಾಲಿಕ ಮುನ್ನೆಚ್ಚರಿಕೆ ಮತ್ತು ಧೈರ್ಯದ ಕಾರ್ಯವನ್ನು ಕೊಂಕಣ ರೈಲ್ವೆ ಶ್ಲಾಘಿಸಿದೆ. ಕೊಂಕಣ ರೈಲ್ವೆಯ ಸಿಎಮ್‌ಡಿ ಸಂತೋಷ್ ಕುಮಾರ್ ಝಾ ಅವರು ಸಂದೀಪ್ ನಾಯಕ್ ಅವರ ಶೌರ್ಯವನ್ನು ಗುರುತಿಸಿ 10,000 ರೂಪಾಯಿ ಪ್ರೋತ್ಸಾಹಕ ಬಹುಮಾನ ಮಂಜೂರು ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ