Publish Date: Sat, 04 Apr 2026 (10:39 IST)
Updated Date: Sat, 04 Apr 2026 (10:46 IST)
ಅರೆ ಕ್ಷಣವಾಗಿದ್ದರೂ ಆತ ರೈಲಿನಡಿಗೆ ಸಿಲುಕಿ ಪ್ರಾಣವೇ ಹೋಗುತ್ತಿತ್ತು. ಆದರೆ ಆತನ ಜೀವ ಗಟ್ಟಿಯಿತ್ತು. ಆತನನನ್ನು ಕಾಪಾಡಿದ್ದು ಯಾರು, ಹೇಗೆ ಎಂದು ಈ ವಿಡಿಯೋ ನೋಡಿ.
ರೈಲ್ವೇ ನಿಲ್ದಾಣದಲ್ಲಿ ರೈಲು ಬರುವಾಗ ಮೈ ಎಲ್ಲಾ ಎಚ್ಚರವಾಗಿದ್ದರೂ ಸಾಲದು. ಕೆಲವರು ರೈಲು ಹತ್ತುವ ಗಡಿಬಿಡಿಯಲ್ಲಿ ಕಾಲು ಜಾರಿ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳುವುದೂ ಇದೆ. ಇಂತಹದ್ದೇ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದು ಮುಂಬೈನ ಬೊರಿವಲಿ ರೈಲ್ವೇ ನಿಲ್ದಾಣದಲ್ಲಿ ನಡೆದ ಘಟನೆ. ಓರ್ವ ವ್ಯಕ್ತಿ ಚಾಲನೆಯಲ್ಲಿರುವ ರೈಲಿನಿಂದ ಸ್ಲಿಪ್ ಆಗಿ ಕೆಳಗೆ ಇಳಿಯುತ್ತಾನೆ. ರೈಲು ಚಲಿಸುತ್ತಿರುವ ಕಾರಣ ಮತ್ತು ಲಗೇಜ್ ಕೂಡಾ ಕೈಯಲ್ಲಿದ್ದಿದ್ದರಿಂದ ಆತನಿಗೆ ತನ್ನನ್ನು ನಿಯಂತ್ರಿಸಲು ಕಷ್ಟವಾಗುತ್ತದೆ.
ಈ ಧಾವಂತದಲ್ಲಿ ಆತ ಇನ್ನೇನು ರೈಲಿನಡಿಗೆ ಬೀಳಬೇಕಿತ್ತು. ಆದರೆ ಅಲ್ಲೇ ಇದ್ದ ಟಿಟಿ ರಂಜಿತ್ ಯಾದವ್ ಎಂಬವರು ಇದನ್ನು ಮೊದಲೇ ಗ್ರಹಿಸಿ ತಕ್ಷಣವೇ ಆ ವ್ಯಕ್ತಿಯನ್ನು ಹಿಡಿದು ಕಾಪಾಡಿದ್ದಾರೆ. ಇಲ್ಲದೇ ಹೋದರೆ ಆ ವ್ಯಕ್ತಿಯ ಕತೆ ಏನಾಗುತ್ತಿತ್ತೋ ದೇವರೇ ಬಲ್ಲ. ಈ ಭಯಾನಕ ಕ್ಷಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.