Select Your Language

Notifications

webdunia
webdunia
webdunia
webdunia

ಅಯ್ಯೋ ಹೀಗೂ ಆಗುತ್ತಾ.. ಹೋಟೆಲ್ ನಲ್ಲಿ ಮೊಟ್ಟೆ ತಿಂದ ವ್ಯಕ್ತಿಯ ಕತೆ ಏನಾಯ್ತು ನೋಡಿ Video

Kochi hotel incident
Photo Credit: X
ಕೇರಳದ ಕೊಚ್ಚಿಯ ಎಂ.ಜಿ. ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ ಇತ್ತೀಚೆಗೆ ಆತಂಕಕಾರಿ ಹಾಗೂ ಅಷ್ಟೇ ಸಾಹಸಮಯ ಘಟನೆಯೊಂದು ನಡೆದಿದೆ. ಸ್ನೇಹಿತನೊಂದಿಗೆ ಹೋಟೆಲ್‌ಗೆ ಬಂದಿದ್ದ ಯುವಕನಿಗೆ ಊಟ ಮಾಡುವಾಗ ಹಠಾತ್ತಾಗಿ ಮೊಟ್ಟೆಯ ತುಂಡೊಂದು ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಟ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಆದರೆ ಸ್ನೇಹಿತ ಹಾಗೂ ಹೋಟೆಲ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
 
ಕೊಲ್ಲಂ ಮೂಲದ ಅನೀಶ್ ಎಂಬ ಯುವಕ ತಮ್ಮ ಸ್ನೇಹಿತ ಮನೇಶ್ ಅವರೊಂದಿಗೆ ಮಧ್ಯಾಹ್ನದ ಊಟಕ್ಕೆ ಹೋಟೆಲ್‌ಗೆ ತೆರಳಿದ್ದರು. ಊಟ ಮಾಡುತ್ತಿದ್ದಾಗ, ಬೇಯಿಸಿದ ಮೊಟ್ಟೆಯ ತುಂಡನ್ನು ನುಂಗುವಾಗ ಅದು ಗಂಟಲಿನಲ್ಲಿ ಸಿಲುಕಿಕೊಂಡಿತು.  ಮೊಟ್ಟೆ ಉಸಿರುನಾಳಕ್ಕೆ ಅಡ್ಡಬಂದಿದ್ದರಿಂದ ಅನೀಶ್‌ಗೆ ಮಾತನಾಡಲು ಅಥವಾ ಉಸಿರಾಡಲು ಸಾಧ್ಯವಾಗಲಿಲ್ಲ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅನೀಶ್, ತಮಗೆ ಉಸಿರುಗಟ್ಟುತ್ತಿರುವುದನ್ನು ಸೈಗೆಯ ಮೂಲಕ ಸ್ನೇಹಿತನಿಗೆ ತಿಳಿಸಿದರು.  
 
ಸ್ಥಿತಿಯ ಗಂಭೀರತೆಯನ್ನು ತಕ್ಷಣವೇ ಅರಿತ ಸ್ನೇಹಿತ ಮನೇಶ್, ಅನೀಶ್ ಅವರನ್ನು ಎದ್ದು ನಿಲ್ಲಿಸಿ, ಮುಂಭಾಗಕ್ಕೆ ಬಾಗುವಂತೆ ಮಾಡಿದರು. ನಂತರ ಅವರ ಬೆನ್ನಿನ ಹಿಂಭಾಗದಲ್ಲಿ (ಎರಡು ಹೆಗಲ ಮಧ್ಯೆ) ತೀವ್ರವಾಗಿ ಚಚ್ಚಲು ಪ್ರಾರಂಭಿಸಿದರು. ಇದನ್ನು ಗಮನಿಸಿದ ಹೋಟೆಲ್ ಮಾಲೀಕರು ಮತ್ತು ಸಿಬ್ಬಂದಿ ಸಹ ತಕ್ಷಣವೇ ಅವರ ನೆರವಿಗೆ ಓಡಿಬಂದು ಪ್ರಥಮ ಚಿಕಿತ್ಸೆ ನೀಡಲು ಸಹಕರಿಸಿದರು.  
 
ಬೆನ್ನಿಗೆ ನೀಡಿದ ಈ ಬಲವಾದ ತಳ್ಳುವಿಕೆಯಿಂದಾಗಿ, ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಮೊಟ್ಟೆಯ ತುಂಡು ಹೊರಗೆ ಚಿಮ್ಮಿತು! ಇದರಿಂದ ಅನೀಶ್ ಉಸಿರಾಟ ಸಹಜ ಸ್ಥಿತಿಗೆ ಮರಳಿ, ಪ್ರಾಣಾಪಾಯದಿಂದ ಪಾರಾದರು. ಈ ಇಡೀ ದೃಶ್ಯ ಹೋಟೆಲ್‌ನ ಸಿಸಿಟಿವಿಯಲ್ಲಿಯೂ ಸೆರೆಯಾಗಿದ್ದು, ಪ್ರಥಮ ಚಿಕಿತ್ಸೆಯ ಮಹತ್ವಕ್ಕೆ ಸಾಕ್ಷಿಯಾಗಿದೆ.
pic.twitter.com/WKsvWP9i4d

 

— Subhajit Das (@SantaniSubhajit) July 29, 2026

Share this Story:

Follow Webdunia kannada

ಮುಂದಿನ ಸುದ್ದಿ

ಗೋಮೂತ್ರವೆಂದು ತಮಾಷೆ ಮಾಡಿದ್ದ ಪ್ರಿಯಾಂಕ ಗಾಂಧಿ: ನೀವೂ ಸ್ವಲ್ಪ ಬಳಸಿ ಶುದ್ಧರಾಗ್ತೀರಿ ಎಂದ ಅನುರಾಗ್ ಠಾಕೂರ್ Video