Publish Date: Tue, 07 Apr 2026 (09:50 IST)
Updated Date: Tue, 07 Apr 2026 (09:54 IST)
ಅಸ್ಸಾಂ : ಖುರಾನ್ ನಲ್ಲಿ ನಮಾಜ್ ಮಾಡುವಾಗ ಹಾವು ಕಂಡರೂ ಕೊಲ್ಲಬೇಕು ಅಂದಿದ್ದಾರೆ. ಅದೇ ರೀತಿ ಬಿಜೆಪಿ, ಆರ್ ಎಸ್ಎಸ್ ನವರನ್ನೂ ನೀವು ನಮಾಜ್ ಬಿಟ್ಟು ನಿರ್ನಾಮ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅಸ್ಸಾಂ ಚುನಾವಣೆ ಪ್ರಚಾರದ ವೇಳೆ ಹೇಳಿಕೆ ನೀಡಿದ್ದಾರೆ.
ಮೊನ್ನೆಯಷ್ಟೇ ಗುಜರಾತಿಗಳು ಅನಕ್ಷರಸ್ಥರು ಎಂದು ವಿವಾದ ಮೈಮೇಲೆಳದುಕೊಂಡಿದ್ದ ಖರ್ಗೆ ಇದೀಗ ಬಿಜೆಪಿ, ಆರ್ ಎಸ್ಎಸ್ ನವರನ್ನು ಕೊಲ್ಲಬೇಕು ಎಂದು ಕರೆ ನೀಡುವ ಮೂಲಕ ಮತ್ತೆ ವಿವಾದ ಮೈ ಮೇಲೆಳೆದುಕೊಂಡಿದ್ದಾರೆ. ಇದು ಯಾವುದೂ ಚುನಾವಣಾ ಆಯೋಗದ ಕಣ್ಣಿಗೆ ಕಾಣ್ತಿಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಅಸ್ಸಾಂನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರ ವೇದಿಕೆ ಮೇಲೆ ಖರ್ಗೆ ಈ ವಿವಾದಾತ್ಮಕ ಮಾತನಾಡಿದ್ದಾರೆ. ಖುರಾನ್ ನಲ್ಲಿ ಹೇಳುತ್ತಾರೆ, ನೀವು ನಮಾಜ್ ಮಾಡುವಾಗ ಸರ್ಪವೊಂದು ಕಂಡರೆ ನಮಾಜ್ ಅರ್ಧಕ್ಕೇ ಬಿಟ್ಟು ಅದನ್ನು ಕೊಂದರೆ ತಪ್ಪಿಲ್ಲ ಎಂದು. ಅದೇ ರೀತಿ ನೀವು ಈಗ ನಮಾಜ್ ಮಾಡುತ್ತಿದ್ದರೂ ಆರ್ ಎಸ್ಎಸ್, ಬಿಜೆಪಿಯವರನ್ನು ಕಂಡರೆ ನಿರ್ನಾಮ ಮಾಡಬೇಕು ಎಂದಿದ್ದಾರೆ.
ಅವರ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿದೆ. ಆರ್ ಎಸ್ಎಸ್, ಬಿಜೆಪಿಯನ್ನು ವಿಷ ಸರ್ಪ ಎಂದಿರುವ ಖರ್ಗೆ ಅವರನ್ನು ನಿರ್ನಾಮ ಮಾಡಬೇಕು ಎಂದಿರುವುದು ಪರೋಕ್ಷವಾಗಿ ಕೊಲೆಗೆ ಪ್ರಚೋದನೆ ನೀಡಿದಂತೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.