Webdunia - Bharat's app for daily news and videos

Install App

ಶಿಕ್ಷಕಿಗೆ ಹೃದಯಾಘಾತವಾಗಿದೆಯೆಂದು ಸಿಪಿಆರ್ ಕೊಟ್ರು: ಆದ್ರೆ ಮುಂದೆ ಆದ ಅನಾಹುತ ತಿಳಿದ್ರೆ ಶಾಕ್ ಆಗ್ತೀರಿ Video

ಕೃಷ್ಣವೇಣಿ ಕೆ
ಶನಿವಾರ, 1 ಆಗಸ್ಟ್ 2026 (10:56 IST)
ಇಂಧೋರ್: ಅರೆಬರೆ ಜ್ಞಾನ ಮತ್ತು ಜಾಗೃತಿಯ ಅಭಾವ ಜೀವ ರಕ್ಷಣೆ ಮಾಡುವ ಬದಲು ಮತ್ತಷ್ಟು ಅಪಾಯ ತಂದೊಡ್ಡಬಹುದು ಎಂಬುದಕ್ಕೆ ಮಧ್ಯಪ್ರದೇಶದಲ್ಲಿ ನಡೆದ ಘಟನೆಯೊಂದು ಉದಾಹರಣೆಯಾಗಿದೆ.  ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಕೈಲಾರಸ್ ನಿವಾಸಿ, 41 ವರ್ಷದ ಶಿಕ್ಷಕಿ ಲಲಿತಾ ಧಾಕಡ್ ಎಂಬುವರು ಕಡು ಬಿಸಿಲಿನಿಂದಾಗಿ ಚಾಲನೆಯಲ್ಲಿದ್ದ ಸ್ಕೂಟರ್‌ನಿಂದ ಚಕ್ಕರು ಬಿದ್ದು ರಸ್ತೆಯಲ್ಲಿ ಅಜ್ಞಾತ ಸ್ಥಿತಿಗೆ ಜಾರಿದ್ದರು.

ಸ್ಥಳದಲ್ಲಿದ್ದ ಇಬ್ಬರು ಯುವಕರು ಶಿಕ್ಷಕಿ ಬಿದ್ದಿರುವುದನ್ನು ನೋಡಿ, ಇತ್ತೀಚೆಗೆ ಹೆಚ್ಚುತ್ತಿರುವ ಹಾರ್ಟ್ ಅಟ್ಯಾಕ್ ಸನ್ನಿವೇಶ ಇರಬಹುದು ಎಂದು ಭಾವಿಸಿ, ತಕ್ಷಣವೇ ಜೀವ ರಕ್ಷಿಸುವ ಉದ್ದೇಶದಿಂದ ಸಿಪಿಆರ್ ನೀಡಲು ಪ್ರಾರಂಭಿಸಿದರು. 

ಯುವಕರು ಶಿಕ್ಷಕಿಯನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ದಾರಿಯುದ್ದಕ್ಕೂ ಸತತವಾಗಿ ಮತ್ತು ತೀವ್ರ ಒತ್ತಡದಿಂದ ಸಿಪಿಆರ್ ನೀಡುತ್ತಲೇ ಸಾಗಿದರು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ, ಶಿಕ್ಷಕಿಗೆ ಯಾವುದೇ ಹಾರ್ಟ್ ಅಟ್ಯಾಕ್ ಅಥವಾ ಕಾರ್ಡಿಯಾಕ್ ಅರೆಸ್ಟ್ ಆಗಿರಲಿಲ್ಲ, ಕೇವಲ ಬಿಸಿಲ ಝಳ ಮತ್ತು ಡಿಹೈಡ್ರೇಶನ್‌ನಿಂದಾಗಿ ಚಕ್ಕರು ಬಂದಿತ್ತು ಎಂಬುದು ತಿಳಿದುಬಂತು.

ಚಿಕಿತ್ಸೆಯ ನಂತರ ಶಿಕ್ಷಕಿಗೆ ಪ್ರಜ್ಞೆ ಬಂದರೂ ಎದೆಯಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿತು. ಎಕ್ಸ್-ರೇ ತಪಾಸಣೆ ನಡೆಸಿದಾಗ, ಅವಶ್ಯಕತೆಯಿಲ್ಲದಿದ್ದರೂ ಮತ್ತು ತಪ್ಪು ವಿಧಾನದಲ್ಲಿ ದೀರ್ಘಕಾಲ ಸಿಪಿಆರ್ ನೀಡಿದ್ದರಿಂದ ಅವರ ಎರಡು ಪಕ್ಕೆಲುಬುಗಳು ಮುರಿದಿರುವುದು ದೃಢಪಟ್ಟಿದೆ.

ವ್ಯಕ್ತಿ ಸಂಪೂರ್ಣ ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿದ್ದು, ಉಸಿರಾಟ ಮತ್ತು ನಾಡಿಮಿಡಿತ ಸಂಪೂರ್ಣ ನಿಂತುಹೋಗಿದ್ದರೆ ಮಾತ್ರ ಸಿಪಿಆರ್ ನೀಡಬೇಕು. ಆದರೆ ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಏನೋ ಮಾಡಲು ಹೋಗಿ ಇನ್ನೇನೋ ಆದ ಪರಿಸ್ಥಿತಿಯಾಯಿತು.


pic.twitter.com/TUitiOzuXn

 

— Mandeep RajBhar (@MandeepRajBhar9) July 31, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಥೂ.. ಯಪ್ಪಾ... ಎಂಥಾ ಜಾಗದಲ್ಲಿ ಕಿತ್ತಾಡ್ತಿದ್ದಾರೆ ಈ ಯುವಕ, ಯುವತಿ Video

ಅಭಿಜಿತ್ ದಿಪ್ಕೆ ಹೇಳುವಂತೆ ನಿಂದನೀಯ ಪದ ಬಳಸಿದರೆ ನಮ್ಮ ಕಾನೂನಿನಲ್ಲಿ ಕೇಸ್ ದಾಖಲಿಸಲು ಅವಕಾಶವಿಲ್ಲವೇ: ರಿಯಾಲಿಟಿ ಇಲ್ಲಿದೆ

ಪ್ರಧಾನಿ ಮೋದಿ ಮಧ್ಯರಾತ್ರಿ ವಿಡಿಯೋ: ತನ್ನನ್ನು ನಿಂದಿಸಿದವರಿಗೆ ಹೇಳಿದ್ದೇನು Video

Video: ಪ್ರಧಾನಿ ಮೋದಿಗೆ ನಿಂದಿಸಿ ಈಗ ಅಳುತ್ತಾ ಕ್ಷಮೆ ಕೇಳಿದ ಜೆನ್ ಜಿ ರುಚಿಕಾ ಸಿಂಗ್

Karnataka Weather: ಕರ್ನಾಟಕದ ಈ ಜಿಲ್ಲೆಗಳಿಗೆ ಇಂದು ಮಳೆ ಮುಂದುವರಿಕೆ

ಮುಂದಿನ ಸುದ್ದಿ
Show comments