Select Your Language

Notifications

webdunia
webdunia
webdunia
webdunia

ಲಕ್ನೋ ಕೋಚಿಂಗ್ ಸೆಂಟರ್ ಅಗ್ನಿ ದುರಂತ: ತರಗೆಲೆಯಂತೆ ಮಹಡಿಯಿಂದ ಜಿಗಿದ ವಿದ್ಯಾರ್ಥಿಗಳ ಭಯಾನಕ ದೃಶ್ಯ Video

Lucknow Coaching Centre Fire
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಕಮರ್ಷಿಯಲ್ ಕಟ್ಟಡದಲ್ಲಿದ್ದ ಕೋಚಿಂಗ್ ಮತ್ತು ಅನಿಮೇಷನ್ ತರಬೇತಿ ಕೇಂದ್ರದಲ್ಲಿ ಕನಿಷ್ಠ 15 ವಿದ್ಯಾರ್ಥಿಗಳು ಸಜೀವ ದಹನವಾಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಕಟ್ಟಡದ ಮೊದಲ ಹಾಗೂ ಎರಡನೇ ಮಹಡಿಯ ಬಾಲ್ಕನಿ ಮತ್ತು ಕಿಟಕಿಗಳಿಂದ ಕೆಳಗೆ ರಸ್ತೆಗೆ ಧುಮುಕುತ್ತಿರುವ ರೋಮಾಂಚನಕಾರಿ ಹಾಗೂ ಅತ್ಯಂತ ದಾರುಣ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
 
ಲಕ್ನೋದ ಅಲಿಗಂಜ್ ಪ್ರದೇಶದ ಪುರಾನಿಯಾ ಚೌರಹಾ ಬಳಿ ಇರುವ ಮೂರು ಮಹಡಿಯ ವಾಣಿಜ್ಯ ಕಟ್ಟಡದಲ್ಲಿ ಜೂನ್ 22, 2026ರ ಸೋಮವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ.
 
ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಕಟ್ಟಡದ ಏಕೈಕ ನಿರ್ಗಮನ ದಾರಿ ಸಂಪೂರ್ಣವಾಗಿ ಹೊಗೆ ಮತ್ತು ಬೆಂಕಿಯಿಂದ ಮುಚ್ಚಿಹೋಗಿತ್ತು. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಪ್ರಾಣ ಉಳಿಸಿಕೊಳ್ಳಲು ಕಿಟಕಿ ಮತ್ತು ಬಾಲ್ಕನಿಗಳತ್ತ ಓಡಿ ಬಂದಿದ್ದಾರೆ.
 
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ, ಕಟ್ಟಡದಿಂದ ದಟ್ಟವಾದ ಕಪ್ಪು ಹೊಗೆ ಹೊರಬರುತ್ತಿರುವುದನ್ನು ಮತ್ತು ವಿದ್ಯಾರ್ಥಿಗಳು ಬಾಲ್ಕನಿಯ ಅಂಚುಗಳಲ್ಲಿ ನೇತಾಡುತ್ತಿರುವುದನ್ನು ಕಾಣಬಹುದು. ಅಗ್ನಿಶಾಮಕ ದಳ ಬರುವ ಮುನ್ನವೇ ಕನಿಷ್ಠ 7 ರಿಂದ 8 ವಿದ್ಯಾರ್ಥಿಗಳು ಪ್ರಾಣಭಯದಿಂದ ನೇರವಾಗಿ ಕೆಳಗಿನ ರಸ್ತೆಗೆ ಧುಮುಕಿದ್ದಾರೆ. ಸ್ಥಳೀಯ ಸಾರ್ವಜನಿಕರು ಕೆಳಗೆ ನಿಂತು ಕೆಲವರನ್ನು ಹಿಡಿಯಲು ಪ್ರಯತ್ನಿಸಿದರಾದರೂ, ಎತ್ತರದಿಂದ ಬಿದ್ದ ಕಾರಣ ಹಲವು ವಿದ್ಯಾರ್ಥಿಗಳಿಗೆ ಗಂಭೀರ ಮೂಳೆ ಮುರಿತ ಹಾಗೂ ಗಾಯಗಳಾಗಿವೆ. ಒಬ್ಬ ವಿದ್ಯಾರ್ಥಿ ಕೆಳಗಿದ್ದ ಕಬ್ಬಿಣದ ಗ್ರಿಲ್ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ.
 
ಇನ್ನು ಕೆಲವು ವಿದ್ಯಾರ್ಥಿಗಳು ಹೊಗೆಯಿಂದ ಬಚ್ಚಿಟ್ಟುಕೊಳ್ಳಲು ಬಾತ್‌ರೂಮ್‌ಗಳ ಒಳಗೆ ಹೋಗಿ ಬೀಗ ಹಾಕಿಕೊಂಡಿದ್ದರು. ಆದರೆ ಉಸಿರುಗಟ್ಟಿ ಅವರೂ ಸಹ ಕಟ್ಟಡದ ಒಳಗಡೆಯೇ ಸಾವನ್ನಪ್ಪಿದ್ದಾರೆ ಎಂದು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ಮತ್ತು ದಟ್ಟವಾದ ಹೊಗೆಗೆ ಸಿಲುಕಿ ಸುಮಾರು 15 ವಿದ್ಯಾರ್ಥಿಗಳು (22 ರಿಂದ 27 ವರ್ಷ ವಯಸ್ಸಿನ ಯುವಕ-ಯುವತಿಯರು) ಸಾವನ್ನಪ್ಪಿದ್ದಾರೆ.  ಕಟ್ಟಡದ ನೆಲಮಹಡಿಯಲ್ಲಿದ್ದ ಪೆಟ್ ಶಾಪ್ (ಪ್ರಾಣಿಗಳ ಅಂಗಡಿ) ಮತ್ತು ಕ್ಲಿನಿಕ್‌ನಲ್ಲಿ ಮೊದಲು ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅದು ಕ್ಷಣಾರ್ಧದಲ್ಲಿ ಮೇಲಿನ ಮಹಡಿಗಳಿಗೆ ವ್ಯಾಪಿಸಿದೆ.
 
 
 
 
 
 
 
 
 
 
 
 
 
 
 

A post shared by FeedFlex (@_feedflex_)


Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರ ಹೋದ ಮೇಲೆ ಎಲ್ಲಾ ಹೋಯ್ತು...ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ಕೊಕ್