Daily Horoscope
✕

ಲೈಕ್, ವ್ಯೂಗಾಗಿ ಭೋರ್ಗರೆಯುವ ಜಲಪಾತದಲ್ಲಿ ನಿಂತಿದ್ದ ಖ್ಯಾತ ಯೂಟ್ಯೂಬರ್ ಕತೆ ಮುಂದೇನಾಯ್ತು: Video

ಕೃಷ್ಣವೇಣಿ ಕೆ
ಭಾನುವಾರ, 30 ಆಗಸ್ಟ್ 2026 (10:22 IST)
ಭುವನೇಶ್ವರ: ಯೂಟ್ಯೂಬ್ ಲೈಕ್ಸ್ ಮತ್ತು ವಿಡಿಯೋ ಶಾರ್ಟ್ಸ್‌ಗಳಿಗಾಗಿ ಅಪಾಯಕಾರಿ ಸಾಹಸ ಮಾಡಲು ಹೋಗಿ 22 ವರ್ಷದ ಭಾರತೀಯ ಯೂಟ್ಯೂಬರ್ ಸಾಗರ್ ಟುಡು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ದಾರುಣ ಘಟನೆ ಒಡಿಶಾದಲ್ಲಿ ನಡೆದಿದೆ.
 
ಒಡಿಶಾದ ಪ್ರಸಿದ್ಧ ಡುಡುಮಾ ಜಲಪಾತದ ಬಳಿ ವಿಡಿಯೋ ಚಿತ್ರೀಕರಿಸುವಾಗ, ಪ್ರೇಕ್ಷಕರನ್ನು ಹಾಗೂ ಅಭಿಮಾನಿಗಳನ್ನು ಮೆಚ್ಚಿಸುವ ಭರದಲ್ಲಿ ಸಾಗರ್ ಟುಡು ನೀರಿನ ತೀವ್ರ ರಭಸಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಜಲಪಾತದ ಭೋರ್ಗರೆಯುವ ನೀರಿನಲ್ಲಿ ಸೆಳೆಯಲ್ಪಟ್ಟ ಅವರು ಕಣ್ಣಿಮೆ ಮುಚ್ಚುವುದರೊಳಗೆ ನೀರಿನಲ್ಲಿ ಮುಳುಗಿದ್ದು, ನಂತರ ಶವವಾಗಿ ಪತ್ತೆಯಾಗಿದ್ದಾರೆ.
 
ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಹಾಗೂ ಹೆಚ್ಚು ಲೈಕ್ಸ್-ವ್ಯೂಸ್ ಪಡೆಯಲು ಯುವಜನತೆ ತಮ್ಮ ಜೀವವನ್ನೇ ಪಣಕ್ಕಿಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾಗರ್ ಟುಡು ಅವರ ಈ ಆಕಸ್ಮಿಕ ಸಾವು ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ತೀವ್ರ ಶೋಕವನ್ನು ಉಂಟುಮಾಡಿದ್ದು, ಪ್ರಕೃತಿ ವಿಕೋಪ ಮತ್ತು ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ವಿಡಿಯೋ ಮಾಡುವ ಮುನ್ನ ಎಚ್ಚರ ವಹಿಸುವಂತೆ ಸ್ಥಳೀಯ ಆಡಳಿತ ಮನವಿ ಮಾಡಿದೆ.
 
ಸಾಮಾಜಿಕ ಜಾಲತಾಣದ ತಾತ್ಕಾಲಿಕ ಲೈಕ್ಸ್‌ಗಳಿಗಿಂತ ಜೀವ ಅತ್ಯಮೂಲ್ಯ ಎಂಬ ದುಃಖದ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
pic.twitter.com/X4btqCNxpW

 

— Raj (@Raj_k__) August 29, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಚಟುವಟಿಕೆಗಳನ್ನು ರಾಹುಲ್ ಗಾಂಧಿಯವರು ಮಾಡುತ್ತಿದ್ದಾರೆ: ಛಲವಾದಿ

ನಾಗರಹೊಳೆ ಅಭಯಾರಣ್ಯದಲ್ಲಿ ಹುಚ್ಚಾಟ ಮಾಡಿದ ಬೈಕ್ ಸವಾರರಿಗೆ ತಕ್ಕ ಶಾಸ್ತಿ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ Video

ತಂದೆ ತಾಯಿ ತೊಡೆ ಮೇಲೆ ಕೂತಿರುತ್ತಿದ್ದರು ಹೇಳಿಕೆ ಸಮರ್ಥಿಸಿಕೊಂಡ ರಾಹುಲ್ ಗಾಂಧಿ: ಹಳೇಬೀಡು ಶಿಲ್ಪದ ಇತಿಹಾಸ ಗೊತ್ತಾ ಎಂದ ಬಿಜೆಪಿ

Gold Price: ಬೆಂಗಳೂರು ಮತ್ತು ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಬೆಲೆ

ಗಾಂಜಾ ಕೇಸ್ ಹಾಕಿ… ಹೋಟೆಲ್ ನಲ್ಲಿ ರೊಮ್ಯಾಂಟಿಕ್ ಮೂಡ್ ನಲ್ಲಿದ್ದ ಯುವ ಜೋಡಿಗೆ ಪೊಲೀಸರ ದರ್ಪ Video

ಮುಂದಿನ ಸುದ್ದಿ
Show comments