Daily Horoscope

Select Your Language

Notifications

webdunia
webdunia
webdunia
webdunia

ಹುಡುಗಿ ಮಾತು ನಂಬಿ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಕತೆ ಗೋವಿಂದ Video

Boy jumps from bridge
Photo Credit: X
ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಸಿನಿಮಾ ಶೈಲಿಯ ನೈಜ ಹೈಡ್ರಾಮಾವೊಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಪ್ರಸಿದ್ಧ ನೈನಿ ಸೇತುವೆಯ ಮೇಲೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿಗಾಗಿ ಒಟ್ಟಿಗೆ ಪ್ರಾಣ ಬಿಡಲು ನಿರ್ಧರಿಸಿ ನದಿಗೆ ಜಿಗಿಯಲು ಬಂದಿದ್ದ ಪ್ರೇಮಿಗಳ ಪೈಕಿ, ಹುಡುಗ ನದಿಗೆ ಧುಮುಕಿದ ತಕ್ಷಣ ಹುಡುಗಿ ಧೈರ್ಯ ಸಾಲದೆ ಅಲ್ಲಿಂದ ಕಾಲ್ಕಿತ್ತಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, ಈ ಪ್ರೇಮಿಗಳ ಮದುವೆಗೆ ಮನೆಯವರ ಕಡೆಯಿಂದ ತೀವ್ರ ವಿರೋಧವಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ಇಬ್ಬರೂ ಒಟ್ಟಿಗೆ ಪ್ರಾಣತ್ಯಾಗ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಯೋಜನೆಯಂತೆ ಪ್ರಯಾಗ್‌ರಾಜ್‌ನ ಯಮುನಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ನೈನಿ ಸೇತುವೆಯ ಮೇಲೆ ಬಂದಿದ್ದಾರೆ. ಇಬ್ಬರೂ 1, 2, 3 ಎಂದು ಎಣಿಸಿ ಒಟ್ಟಿಗೆ ನದಿಗೆ ಜಿಗಿಯಲು ತೀರ್ಮಾನಿಸಿದ್ದರು.

ಸೇತುವೆಯ ತುದಿಯಲ್ಲಿ ನಿಂತು ಇಬ್ಬರೂ ಜಿಗಿಯುವ ಕ್ಷಣ ಬಂದಾಗ, ಹುಡುಗ ಭರವಾಸೆಯಿಂದ ನದಿಗೆ ಧುಮುಕಿದ್ದಾನೆ. ಆದರೆ, ಅದೇ ಸೆಕೆಂಡ್‌ನಲ್ಲಿ ನದಿಯ ಆಳವನ್ನು ನೋಡಿ ಭಯಭೀತಳಾದ ಹುಡುಗಿಯ ಧೈರ್ಯ ಸಂಪೂರ್ಣವಾಗಿ ಉಡುಗಿಹೋಗಿದೆ. ಆಕೆ ನದಿಗೆ ಜಿಗಿಯುವ ಬದಲು, ಸೇತುವೆಯ ಮೇಲಿಂದಲೇ ತಿರುಗಿ ಜಾಗದಿಂದ ಓಡಿಹೋಗಿದ್ದಾಳೆ.

ನದಿಗೆ ಬಿದ್ದ ಯುವಕನಿಗೂ ಈ ದ್ರೋಹ ತಕ್ಷಣಕ್ಕೆ ಅರಿವಾಗಿಲ್ಲ. ಆದರೆ ಅದೃಷ್ಟವಶಾತ್, ನೈನಿ ಸೇತುವೆಯ ಕೆಳಗೆ ಸದಾ ಸನ್ನದ್ಧರಾಗಿರುವ ಸ್ಥಳೀಯ ಮುಳುಗುತಜ್ಞರು ಯುವಕ ನದಿಗೆ ಬೀಳುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಮುಳುಗುತಜ್ಞರು ನದಿಗೆ ಇಳಿದು, ಯುವಕನನ್ನು ಸುರಕ್ಷಿತವಾಗಿ ನೀರಿನಿಂದ ಹೊರಗೆ ಎಳೆದು ತಂದು ಆತನ ಜೀವ ಉಳಿಸಿದ್ದಾರೆ.

ಶಾಕಿಂಗ್ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. "ಎಲ್ಲದರಲ್ಲೂ 'ಲೇಡೀಸ್ ಫಸ್ಟ್' ಅನ್ನೋ ನಿಯಮ ಪಾಲಿಸಬೇಕು ಅಂತ ಹುಡುಗನಿಗೆ ಈಗ ಅರ್ಥ ಆಗಿರುತ್ತೆ" ಎಂದು ಕೆಲವರು ಹಾಸ್ಯ ಮಾಡಿದರೆ, ಇನ್ನಿತರರು "ಕ್ಷಣಿಕ ಆವೇಶದಲ್ಲಿ ಇಂತಹ ಮೂರ್ಖತನದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಪ್ರಾಣ ಅತ್ಯಂತ ಅಮೂಲ್ಯ" ಎಂದು ಬುದ್ಧಿವಾದ ಹೇಳುತ್ತಿದ್ದಾರೆ. pic.twitter.com/OrG221gYeG

 

— Mr Tiwaree (@MrTiwaree) July 16, 2026

Share this Story:

Follow Webdunia kannada

ಮುಂದಿನ ಸುದ್ದಿ

ಯಾವತ್ತೂ ಎಸಿ ಕಾರಿನಲ್ಲಿ ಕೂತಿಲ್ಲ ಅಣ್ಣ.. ಬಡ ಮಕ್ಕಳ ರಿಕ್ವೆಸ್ಟ್ ಗೆ ಐಷಾರಾಮಿ ಕಾರಿನ ಒಡೆಯ ಮಾಡಿದ್ದೇನು Video