Select Your Language

Notifications

webdunia
webdunia
webdunia
webdunia

ಹಾಜಿ ದರ್ಗಾಕ್ಕೆ ಮಹಿಳೆಯರಿಗೂ ಪ್ರವೇಶ: ಬಾಂಬೈ ಹೈಕೋರ್ಟ್‌ನಿಂದ ಐತಿಹಾಸಿಕ ತೀರ್ಪು

ಹಾಜಿ ದರ್ಗಾಕ್ಕೆ ಮಹಿಳೆಯರಿಗೂ ಪ್ರವೇಶ: ಬಾಂಬೈ ಹೈಕೋರ್ಟ್‌ನಿಂದ ಐತಿಹಾಸಿಕ ತೀರ್ಪು
ಮುಂಬೈ , ಶುಕ್ರವಾರ, 26 ಆಗಸ್ಟ್ 2016 (15:26 IST)
ಇದು ಮಹಿಳೆಯರ ಹಕ್ಕಿನ ಹೋರಾಟಕ್ಕೆ ಸಿಕ್ಕ ಅದ್ಭುತ ಗೆಲುವು. ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರೂ ಪ್ರವೇಶಿಸಬಹುದು ಎಂದು ಬಾಂಬೈ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. 

ಮಹಿಳೆಯರಿಗೂ ಪವಿತ್ರ ಸಮಾಧಿ ಸ್ಥಳಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು ಎಂದಿರುವ ಕೋರ್ಟ್ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. 
 
ಪವಿತ್ರ ಸಮಾಧಿ ಸ್ಥಳಕ್ಕೆ ಮಹಿಳೆಯರು ಪ್ರವೇಶಿಸುವುದಕ್ಕೆ ದರ್ಗಾ ಮಂಡಳಿ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಮಹಿಳೆಯರ ಗುಂಪೊಂದು ಜೂನ್ 28 ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
 
ಇನ್ನು ಹೈಕೋರ್ಟ್‌ನ ಈ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ದರ್ಗಾ ಮಂಡಳಿ ತಿಳಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಯಿಂದ ಗೆಲ್ಲಬೇಕು, ಭೀತಿಯಿಂದಲ್ಲ: ಗೋಕಥಾದಲ್ಲಿ ಶ್ರೀಶ್ರೀರಾಘವೇಶ್ವರ ಭಾರತೀ