ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ದಿಡೀರ್ ರಾಜೀನಾಮೆ ಸಲ್ಲಿಸಿದ್ದರ ಹಿಂದಿದೆಯಾ ಬೇರೇ ಕಾರಣ

Krishnaveni K
ಮಂಗಳವಾರ, 22 ಜುಲೈ 2025 (10:12 IST)
Photo Credit: X
ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ದಿಡೀರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರ ಹಿಂದೆ ಬೇರೆಯೇ ಕಾರಣವಿದೆಯಾ? ಹೀಗೊಂದು ಅನುಮಾನವನ್ನು ಕಾಂಗ್ರೆಸ್ ಕೂಡಾ ವ್ಯಕ್ತಪಡಿಸಿದೆ.

ಲೋಕಸಭೆ ಕಲಾಪ ಆರಂಭವಾದ ಬೆನ್ನಲ್ಲೇ ಜಗದೀಪ್ ಧನ್ಕರ್ ತಮ್ಮ ಸ್ಥಾನಕ್ಕೆ ದಿಡೀರ್ ರಾಜೀನಾಮೆ ಸಲ್ಲಿಸಿದ್ದಾರೆ. ಅನಾರೋಗ್ಯದಿಂದಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಆದರೆ ಇದರ ಹಿಂದೆ ಬೇರೆಯೇ ಕಾರಣಗಳಿರಬಹುದೇ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಬಗ್ಗೆ ಕಾಂಗ್ರೆಸ್ ವಕ್ತಾರ ಜೈ ರಾಮ್ ರಮೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಜಗದೀಪ್ ಧನ್ಕರ್ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದ್ದು ಸರಿಯಾಗಿಯೇ ಇದೆ. ಆದರೆ ಅವರ ರಾಜೀನಾಮೆಗೆ ಆರೋಗ್ಯವೇ ಕಾರಣ ಎಂದು ಅನಿಸುತ್ತಿಲ್ಲ. ಕಣ್ಣಿಗೆ ಕಾಣದ ಬೇರೇನೋ ಕಾರಣವಿದೆ ಎನಿಸುತ್ತಿದೆ. ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು. ನಿನ್ನೆ ಸಂಜೆಯೂ ಅವರ ಜೊತೆ ಮಾತನಾಡಿದ್ದೆ. ಅವರ ನಿರ್ಧಾರ ಅಚ್ಚರಿಯಾಗುತ್ತಿದೆ ಎಂದಿದ್ದಾರೆ.

ಕೆಲವೇ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು ಸೂಕ್ತ ಸಮಯದಲ್ಲೇ ನಿವೃತ್ತಿಯಾಗುತ್ತೇನೆ. 2027 ರ ವೇಳೆಗೆ ನಿವೃತ್ತಿಯಾಗಲಿದ್ದೇನೆ ಎಂದಿದ್ದರು. ಆದರೆ ಈಗ ದಿಡೀರ್ ರಾಜೀನಾಮೆ ನೀಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುತ್ತಿದ್ದ ಹಾಗೇ ಆಸ್ಪತ್ರೆಯಿಂದಲೇ ಫೋಸ್ಟ್ ಹಂಚಿಕೊಂಡ ಸೋನಮ್ ವಾಂಗ್ಚುಕ್

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿಗಳ ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಧರ್ಮೇಂದ್ರ ಪ್ರಧಾನ್‌ ತಲೆದಂಡ: ಮೋದಿಗೆ ಬರೆದ ರಾಜೀನಾಮೆ ಪತ್ರದಲ್ಲೇನಿದೆ ಗೊತ್ತಾ

Video: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಸಿಜೆಪಿ ಭರ್ಜರಿ ವಿಜಯೋತ್ಸವ: ಅಭಿಜಿತ್ ದಿಪ್ಕೆ ಸಂಭ್ರಮಾಚರಣೆ ಹೇಗಿತ್ತು

ಕಾಕ್ರೋಚ್‌ಗಳ ಬೇಡಿಕೆಗೆ ಜಗ್ಗಿದ ಕೇಂದ್ರ ಸರ್ಕಾರ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ

ಮುಂದಿನ ಸುದ್ದಿ
Show comments