Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ವಿರುದ್ಧವೇ ಸಿಡಿದೆದ್ದ ವೀರಪ್ಪ ಮೊಯಿಲಿ!

ಕಾಂಗ್ರೆಸ್ ವಿರುದ್ಧವೇ ಸಿಡಿದೆದ್ದ ವೀರಪ್ಪ ಮೊಯಿಲಿ!
Bangalore , ಬುಧವಾರ, 12 ಏಪ್ರಿಲ್ 2017 (10:11 IST)
ಬೆಂಗಳೂರು: ಕಾಂಗ್ರೆಸ್ ವಿರುದ್ಧ ಪಕ್ಷದ ನಾಯಕರೇ ಕಿಡಿಕಾರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದೀಗ ಆ ಸಾಲಿಗೆ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಸೇರ್ಪಡೆಗೊಂಡಿದ್ದಾರೆ.

 

ಇಲೆಕ್ಟ್ರಾನಿಕ್ ಮತಯಂತ್ರದ ಬಳಕೆ ನಿಲ್ಲಿಸಬೇಕೆಂದು, ಆಮ್ ಆದ್ಮಿ ಪಕ್ಷ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿವೆ. ಇದಕ್ಕೆ ಕಾಂಗ್ರೆಸ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಮೊಯಿಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
‘ನಾನು ಕಾನೂನು ಸಚಿವನಾಗಿದ್ದಾಗಲೇ ಮತಯಂತ್ರಗಳನ್ನು ಜಾರಿಗೆ ತರಲಾಯಿತು. ಆರಂಭದಲ್ಲಿ ಹಲವು ನ್ಯೂನ್ಯತೆಗಳಿದ್ದವು. ಆದರೆ ಅದನ್ನೆಲ್ಲಾ ಸರಿಪಡಿಸಲಾಯಿತು. ಆಮೇಲೆ ನಿಮಗೇ ಗೊತ್ತು. ಇವಿಎಂ ಯಂತ್ರಗಳು ಜನಪ್ರಿಯವಾದವು. ಅದರ ಬಳಕೆ ವಿರೋಧಿಸುವುದು ಸರಿಯಲ್ಲ’ ಎಂದಿದ್ದಾರೆ.

 
ಕಾಂಗ್ರೆಸ್ ಸೇರಿದಂತೆ 13 ರಾಷ್ಟ್ರೀಯ ಪಕ್ಷಗಳು, ಚುನಾವಣಾ ಆಯೋಗಕ್ಕೆ ಮತಯಂತ್ರ ಬಳಕೆ ನಿಲ್ಲಿಸುವಂತೆ ಮನವಿ ಮಾಡಿವೆ. ಈ ವಿಚಾರದಲ್ಲಿ ನನ್ನನ್ನೂ ಸೇರಿದಂತೆ ಹಲವರ ಅಭಿಪ್ರಾಯ ಕೇಳಲಿಲ್ಲ ಎಂದು ಮೊಯಿಲಿ ಆರೋಪಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪುತ್ರ ರಾಹುಲ್ ಬಗ್ಗೆ ಸೋನಿಯಾ ಗಾಂಧಿ ಹೇಳಿದ್ದೇನು ಗೊತ್ತಾ?