ಜಮ್ಮು: ಪವಿತ್ರ ವೈಷ್ಣೋ ದೇವಿ ಮಂದಿರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಬಸ್‌ಗೆ ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಜೀವವಾಗಿ ದಹನವಾಗಿದ್ದರೆ, 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕತ್ರಾದಿಂದ ಜಮ್ಮುಗೆ ತೆರಳುತ್ತಿದ್ದ ವೇಳೆ ನಡು ರಸ್ತೆಯಲ್ಲೇ ಈ ಘಟನೆ ನಡೆದಿದೆ.
ವೈಷ್ಣೋ ದೇವಿ ಮಂದಿರಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಕತ್ರಾ ಮೂಲ ಶಿಬಿರವಾಗಿದೆ. ಕತ್ರಾದಿಂದ ಜಮ್ಮುಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಬಸ್‌ನಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಬಸ್ ನಿಲ್ಲಿಸಲಾಗಿದೆ.
ಬಸ್‌ನಲ್ಲಿದ್ದ ಯಾತ್ರಾರ್ಥಿಗಳು ಹೊರಕ್ಕೆ ಜಿಗಿಯಲು ಯತ್ನಿಸಿದ್ದಾರೆ. ಆದರೆ ಒಂದೇ ಸಮನೇ ಇಳಿಯಲು ಸಾಧ್ಯವಾಗದೆ ನಾಲ್ವರು ಸಜೀವ ದಹನವಾಗಿದ್ದಾರೆ. ಇನ್ನು 20 ಮಂದಿ ಗಾಯಗೊಂಡಿದ್ದಾರೆ.
ಬಸ್ ಅವಘಡದಲ್ಲಿ ನಾಲ್ವರು ಮೃತಪಟ್ಟಿರುವ ಕುರಿತು ಜಮ್ಮುವಿನ ಅಡೀಷನಲ್ ಡೈರೆಕ್ಟರ್ ಜನರಲ್ ಮುಕೇಶ್ ಸಿಂಗ್ ಖಚಿತಪಡಿಸಿದ್ದಾರೆ.
ಅತೀಯಾದ ತಾಪಮಾನದಿಂದ ಬಸ್ ಇಂಧನ ಟ್ಯಾಂಕ್ ಬಿಸಿಯಾಗಿದೆ. ಇದರಿಂದ ಇಂಧನ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ಮೂಲಗಳು ಹೇಳಿವೆ. ಆದರೆ ಮುಕೇಶ್ ಸಿಂಗ್ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯಲಿದೆ, ಬಸ್ ಸ್ಫೋಟಗೊಳ್ಳಲು, ಬೆಂಕಿ ಹೊತ್ತಿಕೊಳ್ಳಲು ಕಾರಣವೇನು? ಬಸ್‌ನಲ್ಲಿ ಯಾರಾದರೂ ಸ್ಪೋಟಕವಿಟ್ಟಿದ್ದರೆ ಅನ್ನೋ ಕುರಿತು ತನಿಖೆ ನಡೆಯಲಿದೆ ಎಂದು ಮುಕೇಶ್ ಸಿಂಗ್ ಹೇಳಿದ್ದಾರೆ