Select Your Language

Notifications

webdunia
webdunia
webdunia
webdunia

US Election: ಕಮಲಾ ಹ್ಯಾರಿಸ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ತಮಿಳುನಾಡಿನ ಪೂರ್ವಜನರ ಗ್ರಾಮದ ಜನರಿಗೆ ನಿರಾಸೆ

Republican candidate Donald Trump, Kamala Harris, Kamala Harris' ancestral village,

Sampriya

ತಮಿಳುನಾಡು , ಬುಧವಾರ, 6 ನವೆಂಬರ್ 2024 (16:48 IST)
Photo Courtesy X
ತಮಿಳುನಾಡು: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮುನ್ಸೂಚನೆಗಳು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಗೆಲುವನ್ನು ಸೂಚಿಸುತ್ತಿದ್ದಂತೆ, ತಮಿಳುನಾಡಿನ ಕಮಲಾ ಹ್ಯಾರಿಸ್ ಅವರ ಪೂರ್ವಜರ ತುಳಸೇಂದ್ರಪುರಂ ಗ್ರಾಮದ ಜನರು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಡೆಮೋಕ್ರಾಟ್‌ ಪಕ್ಷದ ಕಮಲಾ ಹ್ಯಾರಿಸ್ ಅವರು ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದ ಜನರು ಸ್ಥಳೀಯ ದೇವಸ್ಥಾನದಲ್ಲಿ ಪಟಾಕಿ ಸಿಡಿಸಲು ಹಾಗೂ ವಿಶೇಷ ಪೂಜೆ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಇದೀಗ ಕಮಲಾ ಹ್ಯಾರಿಸ್ ಸೋಲು ಭಾರೀ ನಿರಾಸೆಯನ್ನು ಮೂಡಿಸಿದೆ.

ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲು ಟ್ರಂಪ್ ಗೆಲ್ಲುವ ಮೂಲಕ ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿಂದೆ ಚಿಕಾಗೋದಿಂದ ತುಳಸೇಂದ್ರಪುರಂ ಗ್ರಾಮಕ್ಕೆ ಆಗಮಿಸಿದ್ದ ಹ್ಯಾರಿಸ್ ಬೆಂಬಲಿಗ ಜಾಯ್ ಅವರು ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು.

"ಈಗಷ್ಟೇ ನಾನು ಅಮೇರಿಕಾ ಚುನಾವಣೆಯ ಫಲಿತಾಂಶವನ್ನು ನೋಡಿದೆ. ಇದು ನಮಗೆ ಸ್ವಲ್ಪ ನಿರಾಶೆಯಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಜೀವನ ತೆರೆದ ಪುಸ್ತಕ ಅಂತೀರಿ, ಮುಡಾ ಹಗರಣ ಸಿಬಿಐಗೆ ಒಪ್ಪಿಸಿ: ಸಿದ್ದರಾಮಯ್ಯಗೆ ಬಿಎಸ್ ವೈ ಆಗ್ರಹ