Select Your Language

Notifications

webdunia
webdunia
webdunia
webdunia

ಯುಪಿ ಚುನಾವಣೆ: 'ಕೈ' ಹಿಡಿಯುತ್ತಾ ಎಸ್‌ಪಿ

ಯುಪಿ ಚುನಾವಣೆ: 'ಕೈ' ಹಿಡಿಯುತ್ತಾ ಎಸ್‌ಪಿ
ನವದೆಹಲಿ , ಬುಧವಾರ, 2 ನವೆಂಬರ್ 2016 (14:55 IST)
ತಮ್ಮ ಪಕ್ಷದೊಳಗೆ ಎದ್ದಿರುವ ಆಂತರಿಕ ಕಲಹದಿಂದ ರೋಸಿ ಹೋಗಿರುವ ಮುಲಾಯಂ ಸಿಂಗ್ ಯಾದವ್ ರಾಜ್ಯದಲ್ಲಿ ಹೇಗಾದರೂ ಅಧಿಕಾರವನ್ನು ಉಳಿಸಿಕೊಳ್ಳಬೇಕು ಎಂಬ ಹವಣಿಕೆಯಲ್ಲಿರುವಂತಿದೆ. ಮಂಗಳವಾರ ಕಾಂಗ್ರೆಸ್‌ನ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಮುಲಾಯಂ ಭೇಟಿಯಾಗಿದ್ದು ಅವರು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುತ್ತಾರಾ ಎಂಬ ಕುತೂಹಲ ಮನೆ ಮಾಡಿದೆ. 
ಮುಲಾಯಂ ಆಪ್ತ ಅಮರ್ ಸಿಂಗ್ ಕೂಡ ಈ ಸಂದರ್ಭದಲ್ಲಿ ಅವರ ಜತೆಗಿದ್ದರು. 
 
ಸಭೆಯಲ್ಲೇನಾಯಿತು ಎಂಬ ವಿವರಗಳು ಬಹಿರಂಗಗೊಂಡಿಲ್ಲ. ಆದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಒಂದಾಗುತ್ತವೆ ಎಂಬು ಊಹಾಪೋಹಗಳು ಹುಟ್ಟಿಕೊಂಡಿವೆ. ಮುಲಾಯಂ ಮತ್ತು ಕಿಶೋರ್ ಬಿಹಾರ್ ಮಾದರಿಯ ಮಹಾ ಮೈತ್ರಿಕೂಟವನ್ನು ರಚಿಸುವ ಬಗ್ಗೆ ಚರ್ಚಿಸಿದರು ಎಂದು ಹೇಳಲಾಗುತ್ತಿದೆ. 
 
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತ ಎಂದು ಗುರುತಿಸಿಕೊಂಡಿರುವ ಕಿಶೋರ್ ರಾಜ್ಯದಲ್ಲಿ ಕಾಂಗ್ರೆಸ್‌ಗಾಗಿ ರಾಜಕೀಯ ತಂತ್ರಗಾರಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ. 
 
ಇದಕ್ಕಿಂತ ಮೊದಲು, ಕಿಶೋರ್ ಮತ್ತು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಜೆಡಿ-ಯು ನಾಯಕ ಕೆ.ಸಿ ತ್ಯಾಗಿ ಅವರ ನಿವಾಸದಲ್ಲಿ ಭೇಟಿಯಾಗಿದ್ದರು ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಮೇಯರ್, ಉಪಮೇಯರ್ ವರ್ತನೆ ಸರಿಯಿಲ್ಲ: ಸಚಿವ ಜಯಚಂದ್ರ