Select Your Language

Notifications

webdunia
webdunia
webdunia
webdunia

ಹೆತ್ತ ಮಗಳನ್ನೇ ಮಂಚಕ್ಕೆ ಕಟ್ಟಿಹಾಕಿ ಜೀವಂತ ಸುಟ್ಟುಹಾಕಿದ ತಂದೆ

ಹೆತ್ತ ಮಗಳನ್ನೇ ಮಂಚಕ್ಕೆ ಕಟ್ಟಿಹಾಕಿ ಜೀವಂತ ಸುಟ್ಟುಹಾಕಿದ ತಂದೆ
ಮೊರಾದಾಬಾದ್ , ಶನಿವಾರ, 24 ಜೂನ್ 2017 (13:38 IST)
ಲಖನೌ:ತನ್ನಿಚ್ಛೆಗೆ ವಿರುದ್ಧವಾಗಿ ಮಗಳು ಮದುವೆಯಾದಳೆಂದು ತಂದೆಯೇ ತನ್ನ ಮಗಳನ್ನು ಮಂಚಕ್ಕೆ ಕಟ್ಟಿಹಾಕಿ ಸೀಮೆಎಣ್ಣೆ ಸುರಿದು ಜೀವಂತ ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
 
ಇಲ್ಲಿನ ಮೊರಾದಾಬದ್ ನಲ್ಲಿ ಮುಸ್ಲೀಂ ವ್ಯಕ್ತಿ ತನ್ನ 22 ವರ್ಷದ ಮಗಳನ್ನು ಜಿವಂತ ಸುಟ್ಟು ಹಾಕಿದ್ದಾನೆ.  ಗುಲ್ ಫಾಶ ಅಬಿ ಎಂಬ ಮಹಿಳೆ ತನ್ನ ಎರಡು ವರ್ಷದ ಮಗನೊಂದಿಗೆ ಮನೆಯಲ್ಲಿದ್ದಾಗ  ಆಕೆಯ ತಂದೆ ಇತರ ಕೆಲವರೊಂದಿಗೆ ಮನೆಗೆ ಬಂದು ಮಗಳನ್ನು ಹೊಡೆದು ಬಡಿದು ಮಂಚಕ್ಕೆ ಕಟ್ಟಿಹಾಕಿದ್ದಾನೆ. ಬಳಿಕ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿದ್ದಾನೆ. ಗುಲ್ ಫಾಶಾ  ಸ್ಥಳದಲ್ಲೇ ಜೀವಂತ ದಹನವಾಗಿದ್ದಾಳೆ.
 
ಗುಲ್‌ಫಾಶಾ ಅತ್ತೆ-ಮಾವ ಪೊಲೀಸರಿಗೆ ತಿಳಿಸಿರುವ ಪ್ರಕಾರ ಆಕೆ ಮೂರು ವರ್ಷಗಳ ಹಿಂದೆ ಸಾಜದ್‌ ಅಲಿ ಎಂಬಾತನನ್ನು, ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಳು. ಇವರ ಮದುವೆಯನ್ನು ತಂದೆ ಮತ್ತು ಮನೆಯವರು ವಿರೋಧಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ 1000 ಪೌರ ಕಾರ್ಮಿಕರಿಗೆ ವಿದೇಶ "ಪ್ರವಾಸ ಭಾಗ್ಯ"