Select Your Language

Notifications

webdunia
webdunia
webdunia
webdunia

ಯುಪಿ ಚುನಾವಣೆ: ಅತಿ ಸಿರಿವಂತ ಅಭ್ಯರ್ಥಿ ಯಾರು ಗೊತ್ತೇ?

UP Elections 2017
ಲಖನೌ , ಮಂಗಳವಾರ, 31 ಜನವರಿ 2017 (15:00 IST)
ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ದಿನದಿನಕ್ಕೂ ರಂಗೇರುತ್ತಿದೆ. ಕಣದಲ್ಲಿರುವವರ ಪೈಕಿ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಅತಿ ಶ್ರೀಮಂತ ಅಭ್ಯರ್ಥಿ ಎನ್ನಿಸಿದ್ದಾರೆ. 

 
ಅಪರ್ಣಾ ಯಾದವ್, ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಿಟಾ ಬಹುಗುಣ ಜೋಶಿ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ. 
 
ಸೋಮವಾರ ಲಖನೌನಲ್ಲಿ ನಾಮಪತ್ರ ಸಲ್ಲಿಸಿದ ಅಪರ್ಣಾ ಮಾಡಿರುವ ಆಸ್ತಿ ಘೋಷಣೆ ಪ್ರಕಾರ, ಆಕೆ ಮತ್ತು ಪತಿ ಪ್ರತೀಕ್ ಯಾದವ್  22.95 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅದರಲ್ಲಿ 5.23ಕೋಟಿ ರೂಪಾಯಿಯ ಸ್ವಾಂಕಿ ಲಂಬೋ ಕಾರ್ ಸೇರಿದೆ. ಅಪರ್ಣಾ ಅವರ ಹೆಸರಲ್ಲಿ ಯಾವುದೇ ವಾಹನಗಳಿಲ್ಲ. 
 
ಕಾರ್ ಖರೀದಿಸಿಲು ಪ್ರತೀಕ್ ಯೂನಿಯನ್ ಬ್ಯಾಂಕ್‌ನಿಂದ 4.5ಕೋಟಿ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದಾರೆ, ಎಂದು ಅಪರ್ಣಾ ತಮ್ಮ ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ.
 
ಅಪರ್ಣಾ 1.88ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಪಿಎಲ್ ಫಲಾನುಭವಿಗಳಿಗೆ ಪಡಿತರ ಬದಲು ಹಣ ನೀಡಲ್ಲ: ಸಿಎಂ ಸಿದ್ದರಾಮಯ್ಯ