Viral Video:ಜನರನ್ನು ರಕ್ಷಣೆ ಮಾಡಬೇಕಿದ್ದ ಪೊಲೀಸ್‌ ಅನ್ನೇ ಕೈ ಹಿಡಿದು ನಡೆಸುವ ಸ್ಥಿತಿ, ಈ ರೀತಿಯಾದ್ರೆ ಏನ್‌ ಕತೆ

Sampriya
ಶನಿವಾರ, 19 ಏಪ್ರಿಲ್ 2025 (18:31 IST)
Photo Credit X
ಬಿಜ್ನೋರ್: ಪೊಲೀಸ್ ಸಿಬ್ಬಂದಿಯೊಬ್ಬರು ಸಮವಸ್ತ್ರದಲ್ಲಿ ರೈಫಲ್ ಹಿಡಿದುಕೊಂಡು ಬಿಜ್ನೋರ್ ರಸ್ತೆಯಲ್ಲಿ ಕುಡಿದು ತೂರಾಡುತ್ತಿರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಜ್ನೋರ್ ಕೊತ್ವಾಲಿ ನಗರದ ಜಾಜಿ ಚೌಕ್‌ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ದೃಶ್ಯಾವಳಿ ವೈರಲ್ ಆದ ನಂತರ ಆಕ್ರೋಶಕ್ಕೆ ಕಾರಣವಾಗಿದೆ.

ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಮದ್ಯಪಾನ ನಶೆಯಲ್ಲಿ ನಿಂತುಕೊಳ್ಳಲು ಸಾಧ್ಯವಾಗದ ಮಟ್ಟಿಗೆ ರೈಫಲ್ ಹಿಡಿದು ನಡುರಸ್ತೆಯಲ್ಲಿ ಪರದಾಡಿದ ಘಟನೆ ನಡೆದಿದೆ.

ಟ್ರಾಫಿಕ್ ಪೋಲೀಸರ ಸಮವಸ್ತ್ರವನ್ನು ಧರಿಸಿರುವ ವ್ಯಕ್ತಿ ಮತ್ತು ಖಾಕಿ ಸಮವಸ್ತ್ರದಲ್ಲಿ ಮತ್ತೊಬ್ಬ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದ ಕಾನ್‌ಸ್ಟೆಬಲ್‌ಗೆ ರಸ್ತೆಯಿಂದ ಆಚೆ ಬರಲು ಸಹಾಯ ಮಾಡಿದ್ದಾರೆ.

ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವವರೇ ಈ ರೀತಿ ನಡೆದುಕೊಂಡರೇ ಜನಸಾಮಾನ್ಯರ ಕತೆಯೇನು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಬಿಜ್ನೋರ್ ಪೊಲೀಸ್ ಇಲಾಖೆ ವೈರಲ್ ವಿಡಿಯೋವನ್ನು ಗಮನಿಸಿದೆ. ಎಕ್ಸ್‌ನಲ್ಲಿನ ಘಟನೆಯ ವೀಡಿಯೊಗೆ ಪ್ರತಿಕ್ರಿಯಿಸಿದ ಬಿಜ್ನೋರ್ ಪೊಲೀಸರು, ವೀಡಿಯೊದಲ್ಲಿ ಕಂಡುಬರುವ ಕಾನ್‌ಸ್ಟೆಬಲ್ ವಿರುದ್ಧ ಅಮಾನತು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಯ್ಯೋ ಹೀಗೂ ಆಗುತ್ತಾ.. ಹೋಟೆಲ್ ನಲ್ಲಿ ಮೊಟ್ಟೆ ತಿಂದ ವ್ಯಕ್ತಿಯ ಕತೆ ಏನಾಯ್ತು ನೋಡಿ Video

ಗೋಮೂತ್ರವೆಂದು ತಮಾಷೆ ಮಾಡಿದ್ದ ಪ್ರಿಯಾಂಕ ಗಾಂಧಿ: ನೀವೂ ಸ್ವಲ್ಪ ಬಳಸಿ ಶುದ್ಧರಾಗ್ತೀರಿ ಎಂದ ಅನುರಾಗ್ ಠಾಕೂರ್ Video

ಅಲ್ಲಾರೀ.. ಬಾಂಗ್ಲಾ ಅಕ್ರಮ ವಲಸಿಗನಿಗಾಗಿ ಭಾರತೀಯನನ್ನು ಬಂಧಿಸುತ್ತೀರಾ: ಗೃಹ ಇಲಾಖೆಗೆ ಪರೋಕ್ಷ ಚಾಟಿ ಬೀಸಿದ ನ್ಯಾ. ನಾಗಪ್ರಸನ್ನ

ಕರ್ನಾಟಕಕ್ಕೆ ಯಾರೆಲ್ಲಾ ನೂತನ ಸಚಿವರು, ಇಂದು ರಾಹುಲ್ ಗಾಂಧಿ ಫೈನಲ್ ಕಾಲ್

ಕಾಕ್ರೋಚ್ ಪಾರ್ಟಿ ಸುಪ್ರೀಂಕೋರ್ಟ್ ನಿಂದಲೂ ದೊಡ್ಡವರೇ: ಸೌರವ್ ದಾಸ್ ಹೇಳಿಕೆಗೆ ನೆಟ್ಟಿಗರ ಕಿಡಿ video

ಮುಂದಿನ ಸುದ್ದಿ
Show comments