ಕೇಂದ್ರ ಸಚಿವ ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಸಚಿವ ನರೇಂದ್ರ ಸಿಂಗ್ ತೋಮರ್, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಖಾತೆ ಸಚಿವ ಕೃಷ್ಣ ಪಾಲ್ ಗುರ್ಜರ್ ಶುಕ್ರವಾರ ವಿಶ್ವ ಪ್ರಸಿದ್ಧ ಹಂಪಿಗೆ ಭೇಟಿ ನೀಡಿದ್ದರು.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಜಾ ಕೂಡ ಅವರ ಜತೆಯಲ್ಲಿದ್ದು ಅವರೆಲ್ಲರಿಗೂ ವಿರೂಪಾಕ್ಷ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ದೇವಸ್ಥಾನದ ಆನೆ ಲಕ್ಷ್ಮೀ ಗಣ್ಯರ ಕೊರಳಿಗೆ ಹೂಮಾಲೆ ಹಾಕಿ ಸ್ವಾಗತಿಸಿತು. ಬಳಿಕ ಮೂವರು ಶ್ರೀ ವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದರು. ಅಲ್ಲಿ ಸಚಿವರು ತಮ್ಮ ಹೆಸರಿನಲ್ಲಿ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಒಳಿತಿಗಾಗಿ ಅರ್ಚನೆ ಮಾಡಿಸಿದರು.
ಪಂಪಾಂಬೆ ದರ್ಶನ ಸಹ ಪಡೆದ ಸಚಿವದ್ವಯರು, ಗಡಿಬಿಡಿಯಲ್ಲೇ ಕೆಲ ಸ್ಮಾರಕಗಳನ್ನು ವೀಕ್ಷಿಸಿ ಜಿಂದಾಲ್ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಿದರು.
ಜಿ.ಸೋಮಶೇಖರ್ ರೆಡ್ಡಿ, ನೇಮಿರಾಜ್ ನಾಯ್ಕ, ಮೃತ್ಯುಂಜಯ ಜಿನಗಾ, ಸೇರಿದಂತೆ ಪಕ್ಷದ ಅನೇಕ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.