Publish Date: Mon, 10 Dec 2018 (13:50 IST)
Updated Date: Mon, 10 Dec 2018 (13:51 IST)
ನವದೆಹಲಿ : ಕೇಂದ್ರದ ಎನ್‌ಡಿಎ ಭಾಗವಾಗಿದ್ದ ಆರ್‌ಎಲ್‌ಎಸ್‌ಪಿ ನಾಯಕ, ಕೇಂದ್ರ ಸಚಿವ ಉಪೇಂದ್ರ ಖುಷ್ವಾಹ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದ ಉಪೇಂದ್ರ ಖುಷ್ವಾಹ್, ಇಂದು ತಮ್ಮ ರಾಜೀನಾಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನೆ ಮಾಡಿದ್ದಾರೆ . 2014ರ ಲೋಕಸಭೆ ಚುನಾವಣೆ ಬಳಿಕ ಕೇಂದ್ರದ ಎನ್‌ಡಿಎ ಗೆ ಬೆಂಬಲ ನೀಡಿ ಸರ್ಕಾರದ ಭಾಗವಾಗಿದ್ದ ಉಪೇಂದ್ರ, ಇದೀಗ ಕೇಂದ್ರ ಸರ್ಕಾರದ ಕಾರ್ಯವೈಖರಿ ಖಂಡಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆದರೆ 2019ರ ಲೋಕಸಭೆ ಚುನಾವಣೆಗಾಗಿ ಬಿಹಾರದಲ್ಲಿ ನಡೆದ ಮೈತ್ರಿಪಕ್ಷದ ಸೀಟು ಹಂಚಿಕೆ ಕುರಿತು ಉಪೇಂದ್ರ ಅವರಿಗೆ ಅಸಮಾಧಾನವಿದ್ದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.