Webdunia - Bharat's app for daily news and videos

Install App

Union Budget 2024: ಬಜೆಟ್ ಮಂಡಿಸಿ ದಾಖಲೆ ಮಾಡಲಿದ್ದಾರೆ ನಿರ್ಮಲಾ ಸೀತಾರಾಮನ್

Krishnaveni K
ಮಂಗಳವಾರ, 23 ಜುಲೈ 2024 (08:48 IST)
ನವದೆಹಲಿ: 2024 ರ ಕೇಂದ್ರ ಬಜೆಟ್ ಇಂದು ಸಂಸತ್ ನಲ್ಲಿ ಮಂಡನೆಯಾಗಲಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ದಾಖಲೆ ಮಾಡಲಿದ್ದಾರೆ. ಇದು ಅವರ 7 ನೇ ಬಜೆಟ್ ಆಗಿರಲಿದೆ.

ಪೂರ್ಣ ಪ್ರಮಾಣದ  ವಿತ್ತ ಸಚಿವೆಯಾಗಿ ಅಧಿಕಾರ ಪೂರೈಸಿದ ಮೊದಲ ಮಹಿಳೆ ಅವರು. ಇದೀಗ ಏಳನೇ ಬಾರಿಗೆ ಬಜೆಟ್ ಮಂಡಿಸಿ ದಾಖಲೆ ಮಾಡಲಿದ್ದಾರೆ. ಸತತವಾಗಿ ಏಳು ಬಜೆಟ್ ಮಂಡಿಸಿ ನಿರ್ಮಲಾ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆ ಮುರಿಯಲಿದ್ದಾರೆ.

ಮೊರಾರ್ಜಿ ದೇಸಾಯಿ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಕಾಲಾವಧಿಯಲ್ಲಿ ಒಟ್ಟು 10 ಬಜೆಟ್ ಮಂಡಿಸಿ ಭಾರತದ ಪರ ಗರಿಷ್ಠ ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಮೊರಾರ್ಜಿ ದೇಸಾಯಿ ಸತತವಾಗಿ ಆರು ಬಜೆಟ್ ಮಂಡಿಸಿ ದಾಖಲೆ ಮಾಡಿದ್ದರು. ಆದರೆ ಈಗ ನಿರ್ಮಲಾ ಆ ದಾಖಲೆ ಮುರಿಯಲಿದ್ದಾರೆ.

ನಿರ್ಮಲಾ ಸೀತಾರಾಮನ್ ಇದೇ ವರ್ಷ ಎರಡನೇ ಬಜೆಟ್ ಮಂಡಿಸುತ್ತಿದ್ದಾರೆ. ಇತ್ತೀಚೆಗೆ 2024 ರ ಫೆಬ್ರವರಿಯಲ್ಲಿ ಮೋದಿ 2.0 ಸರ್ಕಾರದ ಮಧ್ಯಂತರ ಮತ್ತು ಕೊನೆಯ ಬಜೆಟ್ ಮಂಡಿಸಿದ್ದರು. ಇದೀಗ ಮೋದಿ 3.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Tejasvi Surya: ಬೀದಿ ಬದಿ ತಿಂಡಿ ಚಪ್ಪರಿಸಿದ ತೇಜಸ್ವಿ ಸೂರ್ಯ: ವಿಡಿಯೋಗೆ ನೆಟ್ಟಿಗರ ಕಾಮೆಂಟ್ ನೋಡಿ

ಚಿನ್ನಸ್ವಾಮಿ ಕಾಲ್ತುಳಿತ ಯಾಕಾಯ್ತು ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು ನೋಡಿ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price today: ಚಿನ್ನದ ದರ ಇಂದು ಮತ್ತಷ್ಟು ಕಡಿಮೆ

Indore Raja Raguvamshi murder: ಸೋನಮ್, ಪ್ರಿಯಕರ ಮಾಡಿದ ಈ ಒಂದು ತಪ್ಪಿನಿಂದ ಸಿಕ್ಕಿಬಿದ್ದಿದ್ದು ಹೇಗೆ

ಮುಂದಿನ ಸುದ್ದಿ
Show comments