Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯನ್ನು ಶ್ರೀಕೃಷ್ಣನಿಗೆ ಹೋಲಿಸಿದ ಸಚಿವೆ ಉಮಾ ಭಾರತಿ

ಪ್ರಧಾನಿ ಮೋದಿಯನ್ನು ಶ್ರೀಕೃಷ್ಣನಿಗೆ ಹೋಲಿಸಿದ ಸಚಿವೆ ಉಮಾ ಭಾರತಿ
ನವದೆಹಲಿ , ಮಂಗಳವಾರ, 18 ಅಕ್ಟೋಬರ್ 2016 (14:12 IST)
ಪಾಕಿಸ್ತಾನ ಆಕ್ರಮಿತ ಕಾಶ್ಮಿರದಲ್ಲಿ ಸೀಮಿತ ದಾಳಿ ನಡೆಸಲು ಅನುಮತಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರೀಕೃಷ್ಣ ದೇವರ ಅವತಾರದಂತೆ ಎಂದು ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವೆ ಉಮಾ ಭಾರತಿ ಹೇಳಿದ್ದಾರೆ.
 
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ತೋರಿದ ಸಾಹಸದಿಂದ ವಿಶ್ವದಲ್ಲಿಯೇ ಭಾರತ ದೇಶಕ್ಕೆ ಹೊಸ ಇಮೇಜ್ ತಂದುಕೊಟ್ಟಂತಾಗಿದೆ ಎಂದರು. 
 
ನೀವು ನಮ್ಮೊಂದಿಗೆ ಯಾವ ರೀತಿ ವರ್ತಿಸುತ್ತಿರೋ ಅದರಂತೆ ನಾವು ಕೂಡಾ ನಿಮ್ಮೊಂದಿಗೆ ಅದೇ ರೀತಿ ವರ್ತಿಸುತ್ತೇವೆ ಎಂದು ಪ್ರಧಾನಿ ಮೋದಿ ನೆರೆಯ ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
 
ಮೋದಿ ದೇಶದ ಜನತೆಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಗೋಪಿಕೆಯರೊಂದಿಗೆ ಬಂದರೇ ಕೊಳಲು ಬಾರಿಸುತ್ತೇವೆ. ಅರ್ಜುನ್‌ನಂತೆ ಬಂದವರಿಗೆ ಭಗವದ್ಘೀತೆಯನ್ನು ಕೇಳಿಸುತ್ತೇವೆ. ಆದರೆ, ಕಂಸ ಮತ್ತು ಶಿಶುಪಾಲನಂತೆ ಬಂದರೆ ಸುದರ್ಶನ್ ಚಕ್ರ ತೋರಿಸುತ್ತೇವೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
 
ಏತನ್ಮಧ್ಯೆ, ಪಿಒಕೆ ಮೇಲೆ ನಡೆದ ಸೀಮಿತ ದಾಳಿಯ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದರು.
 
ಮಧ್ಯಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಂದು ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾಧ್ಯಮಗಳು ಈಗಾಗಲೇ ಘೋಷಿಸಿವೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಹಣಬಲವಿರುವವರಿಗೆ ಮಾತ್ರ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಗಿರಿ: ಯಡಿಯೂರಪ್ಪ ವ್ಯಂಗ್ಯ