ಉಡ್ತಾ ಪಂಜಾಬ್ ಸಿನಿಮಾ ತಂಡಕ್ಕೆ ಅದ್ಯಾಕೋ ಗೊತ್ತಿಲ್ಲ ಸಮಯಾನೇ ಚೆನ್ನಾಗಿಲ್ಲ ಅನ್ಸುತ್ತೆ. ರಿಲೀಸ‌್‌ಗೂ ಮುನ್ನ ಸೆನ್ಸಾರ್ ಬೋರ್ಡ್ ನಡುವೆ ಜಟಾಪಟಿಯಾದ್ರೆ ಅದರ ಬಳಿಕ ಇನ್ನೇನು ಸಿನಿಮಾವನ್ನು ಆರಾಮಾವಾಗಿ ರಿಲೀಸ್ ಮಾಡ್ಬಹುದು ಅಂತಾ ಪ್ಲಾನ್ ನಲ್ಲಿದ್ದಾಗ ಇದ್ದಕಿದ್ದಂತೆ ಸಿನಿಮಾ ಆನ್ ಲೈನ್‌ನಲ್ಲಿ ಲೀಕ್ ಆಗಿತ್ತು. ಪಾಕಿಸ್ತಾನದಲ್ಲೂ ಸಿನಿಮಾ ರಿಲೀಸ್ ಆಗೋದಕ್ಕೆ ಅಡ್ಡಿಯಾಗಿತ್ತು . ಇದೀಗ ಕೊನೆಗೂ ಪಾಕಿಸ್ತಾನದಲ್ಲಿ ಸಿನಿಮಾ ರಿಲೀಸ್ ಗೆ ಅವಕಾಶ ಸಿಕ್ಕಿದೆ.
ಅಂದ್ಹಾಗೆ ಇದೀಗ ಉಡ್ತಾ ಪಂಜಾಬ್ ಸಿನಿಮಾವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡೋದಕ್ಕೆ ಪಾಕಿಸ್ತಾನದ ಚಲನಚಿತ್ರ ಸೆನ್ಸಾರ್ ಬೋರ್ಡ್ ಅನುಮತಿ ನೀಡಿದೆ. ಹಾಗಂಥ ಸುಮ್ಮನೆ ಅನುಮತಿ ನೀಡಿಲ್ಲ. ಸಿನಿಮಾದಲ್ಲಿ 100 ಕಡೆಗಳಲ್ಲಿ ಕತ್ತರಿಸುವಂತೆ ಹೇಳಿದ್ದು ಅದರ ಬಳಿಕ ಸಿನಿಮಾವನ್ನು ರಿಲೀಸ್ ಮಾಡಿ ಅಂತಾ ಹೇಳಿದೆ. ಅಲ್ಲದೇ ಪಾಕಿಸ್ತಾನಕ್ಕೆ ವಿರೋಧವಾಗಿರುವಂತಹ ಯಾವುದೇ ಸನ್ನಿವೇಶಗಳು ಅದರಲ್ಲಿ ಇರಬಾರದು ಅಂತಾ ಹೇಳಿದೆ.ಅಂದ್ಹೆ 10 ಜನರಿರುವ ಸೆನ್ಸಾರ್ ಬೋರ್ಡ್ ಈ ಕುರಿತು ಮಾತುಕತೆ ನಡೆಸಿ ಸಿನಿಮಾವನ್ನು ರಿಲೀಸ್ ಮಾಡೋದಕ್ಕೆ ಅವಕಾಶ ನೀಡಿದೆ.ಅಂದ್ಹಾಗೆ ಸಿನಿಮಾದಲ್ಲಿ ಹೆಚ್ಚಿನ ಕಡೆಗಳಲ್ಲಿ ಕೇಳಲು ಸಹ್ಯವಲ್ಲದ ಡೈಲಾಗ್‌ಗಳಿವೆ. ಹಾಗಾಗಿಯೇ ನಾವು 100 ಕಡೆಗಳಲ್ಲಿ ಕತ್ತರಿ ಹಾಕಲು ಹೇಳಿದ್ದೇವೆ ಅಂತಾ ಅವರು ಹೇಳಿದ್ದಾರೆ.
ಪಂಜಾಬ್ ನ ಡ್ರಗ್ ಮಾಫಿಯಾದ ಕುರಿತಾದ ಈ ಸಿನಿಮಾದಲ್ಲಿ ಆಲಿಯಾ ಭಟ್ , ಕರೀನಾ ಕಪೂರ್ ಹಾಗೂ ಶಾಹೀದ್ ಕಪೂರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಅಭಿಷೇಕ್ ಚೌಬೆ ಅವರು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದೇ ತಿಂಗಳ 17 ರಂದು ಸಿನಿಮಾ ರಿಲೀಸ್ ಆಗಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.