ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾಪವೆಸಗಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ ಪರಾರಿಯಾಗಿದ್ದು ಗುಜರಾತ್‌ನ ವಡೋದರಾ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಖಾಸಗಿ ಸಂಸ್ಥೆಯೊಂದರ ಟ್ರಸ್ಟಿಯಾಗಿದ್ದ ಜಯೇಶ್ ಪಟೇಲ್, ತಮ್ಮ ಸಂಸ್ಥೆಯಲ್ಲಿ ಅದ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ.ಜಯೇಶ್ ಪಟೇಲ್ ಅವರನ್ನು ಬಿಜೆಪಿ ಅಮಾನತ್ತುಗೊಳಿಸಿ ಆದೇಶ ಹೊಡಿಸಿದೆ.
ಮಹಿಳಾ ವಿದ್ಯಾರ್ಥಿನಿಲಯದ ಹತ್ತಿರದಲ್ಲಿರುವ ಮನೆಯಲ್ಲಿ ಜಯೇಶ್ ಪಟೇಲ್ ಅತ್ಯಾಚಾರವೆಸಗಿದ್ದಾರೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ
ವಿದ್ಯಾರ್ಥಿನಿಯ ಪ್ರಕಾರ, ಜಯೇಶ್ ಪಟೇಲ್ ಸಂಪೂರ್ಣ ಹಾಜರಾತಿ ಮತ್ತು ಉತ್ತಮ ಪರೀಕ್ಷಾ ಫಲಿತಾಂಶ ಕೊಡಿಸುವ ಆಮಿಷವೊಡ್ಡಿದ್ದಾನೆ. ಆದರೆ, ನಾನು ನಿರಾಕರಿಸಿದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾಳೆ.
ಘಟನೆಯ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದಲ್ಲಿ ಕಾಲೇಜಿನಿಂದ ಉಚ್ಚಾಟಿಸುವುದಾಗಿ ಪಟೇಲ್ ಬೆದರಿಕೆಯೊಡ್ಡಿದ್ದಾನೆ ವಿದ್ಯಾರ್ಥಿನಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡು ಬಂಧನಕ್ಕಾಗಿ ಜಾಲ ಬೀಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಯೇಶ್ ಪಟೇಲ್ ಸ್ಥಳೀಯ ರಾಜಕಾರಣಿಯಾಗಿದ್ದು ಆರಂಭದಲ್ಲಿ ಕಾಂಗ್ರೆಸ್‌ನಿಂದ ಎರಡು ಬಾರಿ ವಿಧಾನಸಬೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.