Select Your Language

Notifications

webdunia
webdunia
webdunia
webdunia

ಕುನೋ ನ್ಯಾಷನಲ್ ಪಾರ್ಕ್ನಲ್ಲಿ ಇನ್ನೆರಡು ಚೀತಾ ಮರಿಗಳ ಸಾವು !

ಕುನೋ ನ್ಯಾಷನಲ್ ಪಾರ್ಕ್ನಲ್ಲಿ ಇನ್ನೆರಡು ಚೀತಾ ಮರಿಗಳ ಸಾವು !
ಭೋಪಾಲ್ , ಶುಕ್ರವಾರ, 26 ಮೇ 2023 (08:46 IST)
ಭೋಪಾಲ್ : ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಮರಿಯೊಂದು ಮೃತಪಟ್ಟ ಒಂದೇ ವಾರದ ಅಂತರದಲ್ಲಿ ಇನ್ನೆರಡು ಮರಿಗಳು ಗುರುವಾರ ಮೃತಪಟ್ಟಿರುವ ಘಟನೆ ನಡೆದಿದೆ.

ಈ ವರ್ಷದ ಮಾರ್ಚ್ 24ರಂದು ʻಜ್ವಾಲಾʼ ಎಂಬ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇನ್ನೊಂದು ಮರಿಯ ಸ್ಥಿತಿ ಕೂಡ ಚಿಂತಾಜನಕವಾಗಿದ್ದು ಅದರ ಮೇಲೆ ವೈದ್ಯರು ಸತತ ನಿಗಾ ಇರಿಸಿದ್ದಾರೆ.

ಹೆಚ್ಚಾಗಿ ಚೀತಾ ಮರಿಗಳು 8 ವಾರಗಳಾಗುತ್ತಲೇ ತಮ್ಮ ತಾಯಿಯ ಸುತ್ತ ಸದಾ ಇರುತ್ತವೆ. ಹಾಗೆಯೇ ಈ ಮರಿಗಳೂ ಇದ್ದವು. ಆದರೆ ಚಿರತೆ ತಜ್ಞರ ಪ್ರಕಾರ ಅಫ್ರಿಕಾದಲ್ಲಿ ಚೀತಾ ಮರಿಗಳ ಉಳಿವಿನ ಪ್ರಮಾಣ ತುಂಬಾ ಕಡಿಮೆಯಾಗಿದೆ. ಸತ್ತ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇವತ್ತೇ ಸಿದ್ದು ಸಂಪುಟಕ್ಕೆ ಕ್ಲೈಮ್ಯಾಕ್ಸ್ : ಸಚಿವರು ಯಾರು?