Select Your Language

Notifications

webdunia
webdunia
webdunia
webdunia

ಭಕ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರಾ ಅಜ್ಮೀರ ದರ್ಗಾದ ಮೌಲ್ವಿಗಳು?

ಭಕ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರಾ ಅಜ್ಮೀರ ದರ್ಗಾದ ಮೌಲ್ವಿಗಳು?
ಅಜ್ಮಿರ್ , ಶನಿವಾರ, 27 ಆಗಸ್ಟ್ 2016 (10:21 IST)
ಪ್ರಸಿದ್ಧ ಅಜ್ಮೀರ ದರ್ಗಾದ ಇಬ್ಬರು ಮೌಲ್ವಿ ಸಹೋದರರ ಮೇಲೆ ಭಕ್ತೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ದಾಖಲಾಗಿದೆ. 
 
ಪೀಡಿತಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. 
 
ತಾನು ಅತಿಥಿ ಗೃಹದಲ್ಲಿ ತಂಗಿದ್ದಾಗ ನನ್ನ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳು ಒಂದು ವಾರಗಳ ಕಾಲ ನನ್ನನ್ನು ಅಲ್ಲಿಯೇ ಬಂಧಿಸಿಟ್ಟಿದ್ದರು ಎಂದು ಪೀಡಿತೆ ದೂರಿನಲ್ಲಿ ತಿಳಿಸಿದ್ದಾಳೆ. 
 
ಕೋಲ್ಕತ್ತಾ ಮೂಲದ ಮಹಿಳೆ ಸುಮಾರು 8 ದಿನಗಳ ಹಿಂದೆ ಆಗಮಿಸಿ ಕ್ವಾಜಾ ಮೊಯಿನುದ್ದಿನ್ ಚಿಸ್ಟಿ ಸಮಾಧಿ ದರ್ಶನ ಪಡೆದು ಅತಿಥಿ ಗೃಹದಲ್ಲಿ ತಂಗಿದ್ದಳು. ಅಲ್ಲಿ ಮೌಲ್ವಿ ಸಹೋದರರಾದ ಅಜಿಮ್ ಮತ್ತು ಸಲೀಮ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. 
 
ಗುರುವಾರ ರಾತ್ರಿ ಅಲ್ಲಿಂದ ಪರಾರಿಯಾಗಲು ಯಶಸ್ವಿಯಾದ ಮಹಿಳೆ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದಾಳೆ. 
 
ಏತನ್ಮಧ್ಯೆ ಆರೋಪಿಗಳ ಕುಟುಂಬದ ಸದಸ್ಯರು ಪೀಡಿತೆ ಅಜಿಮ್ ಪತ್ನಿಯಾಗಿದ್ದು 7 ವರ್ಷಗಳ ಹಿಂದೆ ಅವರಿಬ್ಬರ ಮದುವೆಯಾಗಿತ್ತು. ಬಳಿಕ ಅವರಿಬ್ಬರಿಗು ವಿಚ್ಛೇದನವಾಗಿತ್ತು ಎಂದು ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಮ್ಯಾರಿಗೆ ಅಜ್ಞಾನ ಕವಿದಿದೆ ಎಂದ ಮುತಾಲಿಕ್