Select Your Language

Notifications

webdunia
webdunia
webdunia
webdunia

ಗಾಯಕ ಅಭಿಜಿತ್ ಭಟ್ಟಾಚಾರ್ಯಗೆ ಟ್ವಿಟರ್ ಖಡಕ್ ಪ್ರತಿಕ್ರಿಯೆ

Micro-blogging site
ನವದೆಹಲಿ , ಬುಧವಾರ, 31 ಮೇ 2017 (12:15 IST)
ನವದೆಹಲಿ:ನಿಂದನಾತ್ಮಕ ಮತ್ತು ಅಶ್ಲೀಲ ಭಾಷೆಗಳನ್ನು ಬಳಕೆ ಮಾಡಿ ಬರೆದಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರ ಟ್ವಿಟ್ಟರ್ ಖಾತೆಯನ್ನು ಕೆಲ ದಿನಗಳ ಹಿಂದಷ್ಟೇ ಟ್ವಿಟ್ಟರ್ ಸಂಸ್ಥೆ ವಜಾಗೊಳಿಸಿತ್ತು. ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಖಡಕ್ ಸ್ಪಷ್ಟನೆ ನೀಡಿರುವ ಟ್ವಿಟರ್, ನಮ್ಮ ನೀತಿಗಳನ್ನು ಉಲ್ಲಂಘನೆ ಮಾಡುವವರ ಖಾತೆಗಳನ್ನು ಶಾಶ್ವತವಾಗಿ ವಜಾಗೊಳಿಸುತ್ತೇವೆ ಎಂದು ಹೇಳಿದೆ.
 
ಜನರು ಮುಕ್ತವಾಗಿ ತಮ್ಮ ಅಭಿಪ್ರಾಯ, ಅನಿಸಿಕೆ ಹಾಗೂ ನಂಬಿಕೆಗಳನ್ನು ವ್ಯಕ್ತಪಡಿಸುವುದು ನಮಗೆ ಬೇಕು. ಮಿತಿ ಮೀರಿ ಅಶ್ಲೀಲ ಭಾಷೆಗಳನ್ನು ಬಳಕೆ ಮಾಡಿದರೆ ಅವುಗಳನ್ನು ತಡೆಯಲು ನಾವು ನೀತಿಯೆಂಬ ಗೆರೆಯನ್ನು ಎಳೆಯುತ್ತೇವೆ. ಪ್ರಜ್ಞಾಪೂರ್ವಕವಾಗಿ ಕಿರುಕುಳ, ಬೆದರಿಕೆಯೊಡ್ಡುವುದು ಮತ್ತೊಬ್ಬ ವ್ಯಕ್ತಿಯ ದನಿಯನ್ನು ಕುಗ್ಗಿಸುತ್ತದೆ. ನಮ್ಮ ನೀತಿಗಳನ್ನು ಉಲ್ಲಂಘನೆ ಮಾಡುವವರ ಖಾತೆಗಳನ್ನು ನಾನು ಶಾಶ್ವತವಾಗಿ ವಜಾಗೊಳಿಸುತ್ತೇವೆ. ಯಾರಾದರೂ ಕೆಟ್ಟದಾಗಿ ವರ್ತನೆ ತೋರಿದರೆ ಅಂತಹವ ವಿರುದ್ಧ ಜನರು ನಮಗೆ ದೂರುಗಳನ್ನು ನೀಡಬಹುದು ಎಂದು ಹೇಳಿಕೆ ನೀಡಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಥನೆ ವಿಚಾರಕ್ಕೆ ಸಂಭಂಧಿಸಿದಂತೆ ಕೋಮು ಘರ್ಷಣೆ: ಭೋಪಾಲ್ ಉದ್ವಿಗ್ನ