Select Your Language

Notifications

webdunia
webdunia
webdunia
webdunia

ಆಗ್ರಾದಲ್ಲಿ ಅವಳಿ ಸ್ಫೋಟ

ಆಗ್ರಾದಲ್ಲಿ ಅವಳಿ ಸ್ಫೋಟ
ಆಗ್ರಾ , ಶನಿವಾರ, 18 ಮಾರ್ಚ್ 2017 (10:57 IST)
ಉತ್ತರಪ್ರದೇಶದ ಆಗ್ರಾದಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿಯೇ ಈ ಸ್ಪೋಟಗಳು ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಳಗ್ಗೆ 5 ಗಂಟೆ ಸುಮಾರಿಗೆ ರಸೂಲ್ ಪುರ್ ಪ್ರದೇಶದ ಫ್ಲಂಬರ್ ಅಶೋಕ್ ಮನೆಯ ಸಮೀಪ ಮೊದಲ ಸ್ಪೊಟ ಸಂಭವಿಸಿದ್ದು, ಇದಾದ 45 ನಿಮಿಷಗಳಲ್ಲಿ ಫ್ಲಾಟ್ ಫಾರಂ 5ರ ಬಳಿಯ ಕಸದಲ್ಲಿ ವಿಲೇವಾರಿ ಜಾಗದಲ್ಲಿ 2ನೇ ಸ್ಫೋಟ ಸಂಭವಿಸಿದೆ. ಪೊಲೀಸರು, ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಶುಕ್ರವಾರ ರಾತ್ರಿ ಅಂಡಮಾನ್ ಎಕ್ಸ್`ಪ್ರೆಸ್ ಹಳಿ ತಪ್ಪಿಸಲು ಯತ್ನ ನಡೆದಿದೆ ಎಂಬ ವರದಿಗಳ ಬೆನ್ನಲ್ಲೇ ಸ್ಪೋಟಗಳು ಸಂಭವಿಸಿವೆ. ಇತ್ತೀಚೆಗೆ ಉಗ್ರರು ವಿಶ್ವವಿಖ್ಯಾತ ತಾಜ್ ಮಹಲ್ ಸ್ಫೋಟಕ್ಕೆ ಸಂಚು ರೂಪಿಸಿದ್ದಾರೆಂಬ ಗುಪ್ತಚರ ವರದಿ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ದಾಳಿ ಹಿಂದೆ ಬಿಜೆಪಿ ಕುಮ್ಮಕ್ಕು: ಸಿಎಂ ಸಿದ್ಧರಾಮಯ್ಯ