Select Your Language

Notifications

webdunia
webdunia
webdunia
webdunia

ಪಕ್ಷದ ಚಿಹ್ನೆಗಾಗಿ ಲಂಚದ ಆರೋಪ ತಳ್ಳಿಹಾಕಿದ ಟಿಟಿವಿ ದಿನಕರನ್

ಪಕ್ಷದ ಚಿಹ್ನೆಗಾಗಿ ಲಂಚದ ಆರೋಪ ತಳ್ಳಿಹಾಕಿದ ಟಿಟಿವಿ ದಿನಕರನ್
ಚೆನ್ನೈ , ಸೋಮವಾರ, 17 ಏಪ್ರಿಲ್ 2017 (12:42 IST)
ಅಣ್ಣಾಡಿಎಂಕೆ ಎರಡು ಎಲೆಯ ಚಿಹ್ನೆಯನ್ನ ಪಡೆಯಲು ಮಧ್ಯವರ್ತಿ ಮೂಲಕ ಲಂಚದ ಆಮಿಷವೊಡ್ಡಿದ್ದಾರೆಂಬ ಆರೋಪವನ್ನ ಅಣ್ಣಾಡಿಎಂಕೆ ಅಮ್ಮ ಪಕ್ಷದ ಮುಖಂಡ ಟಿಟಿವಿ ದಿನಕರನ್ ತಳ್ಳಿ ಹಾಕಿದ್ದಾರೆ. ದೆಹಲಿ ಪೊಲೀಸರು ಬಂಧಿಸಿರುವ ವ್ಯಕ್ತಿ ನನಗೆ ಗೊತ್ತೇ ಇಲ್ಲ, ನಾನು ಅವನನ್ನ ಒಮ್ಮೆಯೂ ಸಂಪರ್ಕಿಸಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ ಎಂದು ರಾಷ್ಟ್ರಿಯ ಸುದ್ದಿವಾಹಿನಿಗೆ ದಿನಕರನ್ ಪ್ರತಿಕ್ರಿಯಿಸಿದ್ದಾರೆ.
 

`ನಾನು ಆ ವ್ಯಕ್ತಿಯನ್ನ ಭೇಟಿ ಮಾಡಿಲ್ಲ. ಟಿವಿಗಳಲ್ಲಿ ಮಾತ್ರ ಆತನ ಮುಖ ನೋಡುತ್ತಿದ್ಧೇನೆ. ನನಗೆ ಯಾವುದೇ ಸಮನ್ಸ್ ಬಂದಿಲ್ಲ. ಎಫ್`ಐಆರ್ ಬಗ್ಗೆಯೂ ಮಾಹಿತಿ ಇಲ್ಲ. ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ.

ಮಧ್ಯವರ್ತಿ ಸುಖೇಶ್ ಚಂದ್ರಸೇಖರ್ ಯಾರೆಂಬುದೇ ನನಗೆ ಗೊತ್ತಿಲ್ಲ. ನಮ್ಮನ್ನ ರಾಜಕೀಯವಾಗಿ ಮುಗಿಸಲು ಇಂತಹ ಸುದ್ದಿ ಹರಡಲಾಗುತ್ತಿದೆ. ಸುಖೇಶ್ ನನ್ನ ಬಗ್ಗೆ ಮಾತನಾಡಿದ್ದಾನೆಂಬುದು ಖಂಡಿತಾ ಸುಳ್ಳು, ಯಾರು ಇದನ್ನ ಮಾಡುತ್ತಿದ್ದಾರೆ. ಯಾಕೆ ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲವೆಂದು ದಿನಕರನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷಗಾದಿಗೆ ನಾನೇನು ಅರ್ಜಿ ಹಾಕಿಕೊಂಡು ಕುಳಿತಿಲ್ಲ: ಡಿ.ಕೆ. ಶಿವಕುಮಾರ್