Select Your Language

Notifications

webdunia
webdunia
webdunia
webdunia

ಪುನುಗು ಬೆಕ್ಕಿಗಾಗಿ ಟಿಟಿಡಿ ಮತ್ತು ಅರಣ್ಯ ಇಲಾಖೆ ಗುದ್ದಾಟ

ಪುನುಗು ಬೆಕ್ಕಿಗಾಗಿ ಟಿಟಿಡಿ ಮತ್ತು ಅರಣ್ಯ ಇಲಾಖೆ ಗುದ್ದಾಟ
ಹೈದ್ರಾಬಾದ್ , ಸೋಮವಾರ, 6 ಮಾರ್ಚ್ 2017 (10:43 IST)
ಆಂಧ್ರಪ್ರದೇಶದ ಅರಣ್ಯ ಇಲಾಖೆ ಮತ್ತು ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ನಡುವೆ ಜಟಾಪಟಿ ಶುರುವಾಗಿದೆ. ಅದು ಕೇವಲ ಪುನುಗು ಬೆಕ್ಕಿಗಾಗಿ.


ಭಾರತದಲ್ಲಿ ತೀರಾ ವಿರಳ ಎನ್ನಲಾಗುವ ವನ್ಯಜೀವಿಗಳಾದ ಪುನುಗು ಬೆಕ್ಕಿನ ಒಂದು ಜೋಡಿಯನ್ನ ಟಿಟಿಡಿ ಸಾಕಿಕೊಂಡಿದೆ. ಈ ಬೆಕ್ಕು ಗುದದ ಬಳಿ ಇರುವ ರಹಸ್ಯ ಗ್ರಂಥಿಯಿಂದ ಹಳದಿ ಬಣ್ಣದ ಒಂದು ಗ್ರಾಂಗಿಂತಲೂ ಕಡಿಮೆ ತೂಕದ ಸುಗಂಧ ವಸ್ತುವನ್ನ ಹೊರಸೂಸುತ್ತದೆ. ಇದನ್ನ ಪ್ರತಿನಿತ್ಯ ವೆಂಕಟೇಶ್ವರನ ಅಭಿಷೇಕಕ್ಕೆ ಬಳಸಲಾಗುತ್ತದೆ.

ಆದರೆ, ವನ್ಯಜೀವಿ ಕಾಯ್ದೆ ಪ್ರಕಾರ, ಪುನುಗು ಬೆಕ್ಕುಗಳನ್ನ ಒಂದೆಡೆ ಕೂಡಿ ಇಡುವಂತಿಲ್ಲ. ಈ ಕುರಿತು, ಎರಡು ಬಾರಿ ಕೋರ್ಟ್ ಮೊರೆಹೋಗಿರುವ ಅರಣ್ಯ ಇಲಾಖೆ ಸೋಲನುಭವಿಸಿದೆ. ಆದರೆ, ಈಗಲೂ ಒಂದಿಲ್ಲೊಂದು ವಿವಾದ ಹೊತ್ತಿಕೊಳ್ಳುತ್ತಲೇ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿಲ್ಲಿಯನ್ನು ಲಂಡನ್ ಮಾಡುತ್ತೇನೆಂದ ಸಿಎಂ ಅರವಿಂದ್ ಕೇಜ್ರಿವಾಲ್!