Select Your Language

Notifications

webdunia
webdunia
webdunia
webdunia

ತ್ರಿವಳಿ ತಲಾಖ್ ಅತ್ಯಂತ ಕೆಟ್ಟ ಪದ್ಧತಿ: ಸುಪ್ರೀಂಕೋರ್ಟ್

ತ್ರಿವಳಿ ತಲಾಖ್ ಅತ್ಯಂತ ಕೆಟ್ಟ ಪದ್ಧತಿ: ಸುಪ್ರೀಂಕೋರ್ಟ್
ನವದೆಹಲಿ , ಶುಕ್ರವಾರ, 12 ಮೇ 2017 (18:27 IST)
ಮುಸ್ಲಿಂ ಸಮುದಾಯದಲ್ಲಿರುವ ತ್ರಿವಳಿ ತಲಾಖ್ ಅತ್ಯಂತ ಕೆಟ್ಟ ಮತ್ತು ಅನಪೇಕ್ಷಿತ ಮದುವೆ ವಿಸರ್ಜಿಸುವ ವಿಧಾನ ಎಂದು ಸುಪ್ರೀಂಕೋರ್ಟ್`ನ ಸಂವಿಧಾನ ಪೀಠ ಅಭಿಪ್ರಾಯಪಟ್ಟಿದೆ.

ತ್ರಿವಳಿ ತಲಾಖ್ ಇಸ್ಲಾಂ ಧರ್ಮದ ಮೂಲಭೂತ ಅಂಶವೇ ಎಂಬ ಪ್ರಶ್ನೆ ಎತ್ತುವ ಮೂಲಕ ನಿನ್ನೆಯಿಂದ ವಿಚಾರಣೆ ಆರಂಭಿಸಿರುವ ಸುಪ್ರೀಂಕೋರ್ಟ್, ಬಹುಪತ್ನಿತ್ವ ವಿಚಾರದ ಹಸ್ತಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

ಇದೇವೇಳೆ, ಸಲಹೆಗಾರ ಸಲ್ಮಾನ್ ಖುರ್ಷಿದ್ ಕೋರ್ಟ್`ಗೆ ಸಲಹೆ, ಸೂಚನೆ ನೀಡುತ್ತಿದ್ದಾರೆ. ಮದುವೆ ಒಪ್ಪಂದದ ಆಧಾರದ ಮೇಲೆ ತಲಾಖ್ ನಿರಾಕರಿಸುವ ಹಕ್ಕು ಪತ್ನಿಗಿದೆ ಎಂದು ತಿಳಿಸಿದ್ದಾರೆ. ತಲಾಖ್ ವಿರೋಧಿಸಿ ಮುಸ್ಲಿಂ ಮಹಿಳೆಯರು ಸೇರಿ 7 ಮಂದಿ ಸಲ್ಲಿಸಿರುವ ಅರ್ಜಿಗಳನ್ನ ಸುಪ್ರೀಂಕೋರ್ಟ್ ಒಟ್ಟೊಟ್ಟಿಗೆ ವಿಚಾರಣೆ ನಡೆಸುತ್ತಿದೆ. ಇದೇವೇಳೆ, ಕೆಲ ಇಸ್ಲಾಂ ದೇಶಗಳಲ್ಲೇ ತಲಾಖ್ ನಿಷೇಧಿಸಿರುವ ಬಗ್ಗೆ ವರದಿ ನೀಡುವಂತೆಯೂ ಕೋರ್ಟ್ ಸೂಚಿಸಿದೆ..

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

                      

Share this Story:

Follow Webdunia kannada

ಮುಂದಿನ ಸುದ್ದಿ

ಟಾಪ್ ಲೆಸ್ ಮಾಡೆಲ್`ಗೆ ಯೋಗ ಕಲಿಸಿದ ಓಂ ಸ್ವಾಮಿ