Select Your Language

Notifications

webdunia
webdunia
webdunia
webdunia

ಉದ್ಯೋಗದಿಂದ ವಜಾಗೊಳಿಸಿದ್ದಕ್ಕೆ ಮಾಲೀಕನ ಪುತ್ರನ ಹತ್ಯೆಗೈದ ಮಹಿಳೆ

ಉದ್ಯೋಗ
ತಿರುಚಿ , ಮಂಗಳವಾರ, 2 ಆಗಸ್ಟ್ 2016 (15:51 IST)
ಉದ್ಯೋಗದಿಂದ ತೆಗೆದುಹಾಕಿದ ಕೋಪದ ಭರದಲ್ಲಿ 24 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಸೇಡು ತೀರಿಸಿಕೊಳ್ಳಲು ತನ್ನ ಮಾಲೀಕನ ಪುತ್ರನನ್ನು ಹತ್ಯೆ ಮಾಡಿದ ಹೇಯ ಘಟನೆ ವರದಿಯಾಗಿದೆ.
 
ಶಿವಕುಮಾರ್ ಮತ್ತು ಲಕ್ಷ್ಮಿ ಪ್ರಭಾ ಎನ್ನುವ ದಂಪತಿಗಳಿಗೆ ಶಿರಿಶ್ ಎನ್ನುವ ಮೂರು ವರ್ಷದ ಪುತ್ರನಿದ್ದ. ದಂಪತಿಗಳು ಮೊಬೈಲ್ ಅಂಗಡಿಯ ಮಾಲೀಕರಾಗಿದ್ದರು. ತಮ್ಮ ನೆರೆಮನೆಯಲ್ಲಿ ವಾಸವಾಗಿದ್ದ ರೋಸ್ಲಿನ್ ಮೇರಿ ಎನ್ನುವ ಮಹಿಳೆಯನ್ನು ಅಂಗಡಿಯಲ್ಲಿ ಕೆಲಸಕ್ಕಿಟ್ಟುಕೊಂಡಿದ್ದರು. ದಂಪತಿಗಳೊಂದಿಗೆ ಮತ್ತು ಮಗುವಿನೊಂದಿಗೆ ರೋಸ್ಲಿನ್ ಉತ್ತಮ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.  
 
ಆದರೆ, ಯಾವುದೇ ತಪ್ಪು ಕಲ್ಪನೆಯಿಂದಾಗಿ ಶಿವಕುಮಾರ್, ತಮ್ಮ ಮೊಬೈಲ್ ಅಂಗಡಿಯಲ್ಲಿ ಉದ್ಯೋಗದಲ್ಲಿದ್ದ ರೋಸ್ಲಿನ್ ಮೇರಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.
 
ಏತನ್ಮಧ್ಯೆ, ರೋಸ್ಲಿನ್, ಸೇಡು ತೀರಿಸಿಕೊಳ್ಳುವ ಸಂಚು ರೂಪಿಸಿ, ತನ್ನ ಮಾಲೀಕರ ಮನೆಗೆ ಬಂದು ಮಗು ಶಿರಿಶ್‌ನನ್ನು ಕೆಲ ಸಮಯದವರೆಗೆ ಹೊರಗೆ ತೆಗೆದುಕೊಂಡು ಹೋಗುವುದಾಗಿ ಲಕ್ಷ್ಮಿ ಪ್ರಭಾಗೆ ತಿಳಿಸಿದ್ದಾಳೆ.
 
ಕೆಲ ಗಂಟೆಗಳ ನಂತರ ಮನೆಗೆ ಮಗುವನ್ನು ಕರೆದುಕೊಂಡು ಬಂದ ರೋಸ್ಲಿನ್, ಮಗು ಮಲಗಿದೆ ತೊಂದರೆ ಕೊಡಬೇಡಿ ಎಂದು ಮಗುವಿನ ತಾಯಿಗೆ ಹೇಳಿದ್ದಾಳೆ.
 
ಆದರೆ, ದಂಪತಿಗಳಾದ ಶಿವಕುಮಾರ್ ಮತ್ತು ಲಕ್ಷ್ಮಿಪ್ರಭಾಗೆ ಅನುಮಾನ ಬಂದು ನೋಡಿದಾಗ, ಮಗುವಿನಲ್ಲಿ ಯಾವುದೇ ಚಲನೆಯಿರದಿರುವುದು ಕಂಡು ಬಂದಿದೆ. ಆಘಾತಗೊಂಡ ದಂಪತಿಗಳು ಕೂಡಲೇ ಮಗವನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದಾಗ, ಮಗು ಸಾವನ್ನಪ್ಪಿ ಕೆಲ ಗಂಟೆಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
 
ಇದೇ ಸಂದರ್ಭದಲ್ಲಿ ಆರೋಪಿ ರೋಸ್ಲಿನ್ ಮೇರಿ, ಪಲಕ್ಕರೈ ಪೊಲೀಸ್ ಠಾಣೆಗೆ ತೆರಳಿ ಶರಣಾಗಿ, ತನ್ನನ್ನು ಉದ್ಯೋಗದಿಂದ ತೆಗೆದುಹಾಕಿದ್ದರಿಂದ ಸೇಡು ತೀರಿಸಿಕೊಳ್ಳಲು ಮಾಲೀಕರ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರಬಹುದೆಂದು ಶಂಕಿಸಿ ಗೆಳೆಯನ ಹತ್ಯೆ