Select Your Language

Notifications

webdunia
webdunia
webdunia
webdunia

ಮಾನ, ಮರ್ಯಾದೆ ಇದ್ರೆ ಬುಲಂದ್‌ಶಹರ್ ಗ್ಯಾಂಗ್‌ರೇಪ್ ಪ್ರಕರಣ ಸಿಬಿಐಗೆ ಒಪ್ಪಿಸಿ: ಬಿಜೆಪಿ

ಮಾನ, ಮರ್ಯಾದೆ ಇದ್ರೆ ಬುಲಂದ್‌ಶಹರ್ ಗ್ಯಾಂಗ್‌ರೇಪ್ ಪ್ರಕರಣ ಸಿಬಿಐಗೆ ಒಪ್ಪಿಸಿ: ಬಿಜೆಪಿ
ನವದೆಹಲಿ , ಮಂಗಳವಾರ, 2 ಆಗಸ್ಟ್ 2016 (20:11 IST)
ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆಗಳಿರುವಂತೆಯೇ ಸಮಾಜವಾದಿ ಪಕ್ಷದ ಸರಕಾರ ಕ್ರಿಮಿನಲ್‌ಗಳಿಗೆ ರಕ್ಷಣೆ ನೀಡಿ ಪ್ರೋತ್ಸಾಹಿಸುತ್ತಿದೆ. ಒಂದು ವೇಳೆ, ಅಖಿಲೇಶ್ ಯಾದವ್ ಸರಕಾರಕ್ಕೆ ಮಾನ, ಮರ್ಯಾದೆ ಇದ್ರೆ ಬುಲಂದ್‌ಶಹರ್ ಗ್ಯಾಂಗ್‌ರೇಪ್ ಪ್ರಕರಣ ಸಿಬಿಐಗೆ ಒಪ್ಪಿಸಲಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. 
 
ಸಮಾಜವಾದಿ ಪಕ್ಷ ಆರಂಭದಲ್ಲಿ ಮುಸ್ಲಿಮರನ್ನು ಓಲೈಸುತ್ತಿತ್ತು. ಇದೀಗ ವಿವಿಧ ಧರ್ಮಗಳಲ್ಲಿರುವ ಕ್ರಿಮಿನಲ್‌ಗಳನ್ನು ಓಲೈಸುತ್ತಿದೆ ಎಂದು ಕಿಡಿಕಾರಿದೆ.
 
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜವಾದಿ ಪಕ್ಷದ ನಗರಾಭಿವೃದ್ಧಿ ಸಚಿವ ಆಜಂ ಖಾನ್ ಇದೊಂದು ರಾಜಕೀಯ ಸಂಚು ಎಂದು ಹೇಳಿರುವುದು ನೋಡಿದಲ್ಲಿ ಸರಕಾರ ಮತಗಳಿಗಾಗಿ ಎಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎನ್ನುವುದು ಸಾಬೀತಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
 
ಕಳೆದ 2012ರಿಂದ 2016ರವರೆಗೆ ಸಮಾಜವಾದಿ ಪಕ್ಷದ ಸರಕಾರದಲ್ಲಿ ಅಪರಾಧಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ರಾಜ್ಯದಲ್ಲಿ ಜನತೆ ವಿಶೇಷವಾಗಿ ಮಹಿಳೆಯರು ಆತಂಕದಲ್ಲಿ ಜೀವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
 
ಮಹಿಳೆಯರ ವಿರುದ್ಧದ ದೌರ್ಜನ್ಯದಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2920 ರೇಪ್ ಪ್ರಕರಣಗಳು, 12,198 ಹತ್ಯೆ ಮತ್ತು 6015 ದರೋಡೆ ಪ್ರಕರಣಗಳು ನಡೆದಿವೆ ಎಂದು ಮಾಹಿತಿ ನೀಡಿದ್ದಾರೆ.
 
ಇಂತಹ ಭೀಕರ ಘಟನೆಯನ್ನು ಸಚಿವ ಆಜಂಖಾನ್ ರಾಜಕೀಯಗೊಳಿಸುತ್ತಿದ್ದಾರೆ. ಇದನ್ನು ನೋಡಿದಲ್ಲಿ ಸರಕಾರ ವೋಟ್ ಬ್ಯಾಂಕ್‌ಗಾಗಿ ಯಾವ ಮಟ್ಟಕ್ಕೂ ಇಳಿಯಲು ಸಿದ್ದವಾಗಿದೆ ಎನ್ನುವುದು ಗೊತ್ತಾಗುತ್ತದೆ. ಒಂದು ವೇಳೆ ಸಿಎಂ ಅಖಿಲೇಶ್ ಯಾದವ್‌ಗೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದಲ್ಲಿ ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಿ ಬಲಪಶುಗಳಿಗೆ ನ್ಯಾಯ ಕೊಡಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಸಲಹೆ ನೀಡಿದ್ದಾರೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಹಿಲೆರಿ ಸ್ಪರ್ಧಿಸಲು ಜಯಲಲಿತಾ ಕಾರಣವಂತೆ..!