Daily Horoscope

Select Your Language

Notifications

webdunia
webdunia
webdunia
webdunia

ರೈಲು ಪ್ರಯಾಣದಲ್ಲಿ ಇನ್ಮುಂದೆ ಮೊಬೈಲ್, ಲ್ಯಾಪ್ ಟಾಪ್ ಈ ಸಮಯದಲ್ಲಿ ಚಾರ್ಜ್ ಮಾಡೋ ಹಾಗಿಲ್ಲ: ಕಾರಣವೇನು ಗೊತ್ತಾ

Mobile charging
Photo Credit: AI
ದೆಹಲಿ: ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಅಥವಾ ಲ್ಯಾಪ್ ಟಾಪ್ ಚಾರ್ಜ್ ಮಾಡುವುದಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಇಲಾಖೆಯು ಕಟ್ಟುನಿಟ್ಟಿನ ನಿಯಮವೊಂದನ್ನು ಜಾರಿಗೆ ತಂದಿದೆ. ಇದರನ್ವಯ ಪ್ರತಿದಿನ ರಾತ್ರಿ 11:00 ಗಂಟೆಯಿಂದ ಬೆಳಿಗ್ಗೆ 5:00 ಗಂಟೆಯವರೆಗೆ ರೈಲುಗಳಲ್ಲಿನ ಚಾರ್ಜಿಂಗ್ ಪಾಯಿಂಟ್‌ಗಳಿಗೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗುತ್ತದೆ. ಹಾಗಾದರೆ ಈ ನಿಯಮ ಜಾರಿಗೆ ತರಲು ಕಾರಣವೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
 
ಈ ನಿಯಮದ ಹಿಂದಿನ ಪ್ರಮುಖ ಕಾರಣಗಳು ಯಾವುವು?
ಅಗ್ನಿ ಅವಘಡಗಳ ತಡೆ:
ರಾತ್ರಿ ವೇಳೆಯಲ್ಲಿ ಪ್ರಯಾಣಿಕರು ಮೊಬೈಲ್, ಲ್ಯಾಪ್‌ಟಾಪ್ ಅಥವಾ ಪವರ್ ಬ್ಯಾಂಕ್‌ಗಳನ್ನು ಚಾರ್ಜ್‌ಗೆ ಹಾಕಿ ಗಾಢ ನಿದ್ರೆಗೆ ಜಾರುತ್ತಾರೆ. ಇದರಿಂದ ಎಲೆಕ್ಟ್ರಾನಿಕ್ ಸಾಧನಗಳು ಅತಿ ಹೆಚ್ಚು ಬಿಸಿಯಾಗುವ ಹಾಗೂ ಬ್ಯಾಟರಿ ಸ್ಫೋಟಗೊಳ್ಳುವ ಅಪಾಯವಿರುತ್ತದೆ. ಇತ್ತೀಚೆಗೆ ದಕ್ಷಿಣ ಪೂರ್ವ ರೈಲ್ವೆ ವಲಯದಲ್ಲಿ ಚಾರ್ಜಿಂಗ್‌ನಲ್ಲಿದ್ದ ಪವರ್ ಬ್ಯಾಂಕ್ ಒಂದರಲ್ಲಿ ದಾವನ ಮತ್ತು ಹೊಗೆ ಕಾಣಿಸಿಕೊಂಡ ಘಟನೆಯೂ ನಡೆದಿತ್ತು. ಇಂತಹ ದೊಡ್ಡ ಅನಾಹುತಗಳು ಮತ್ತು ಬೆಂಕಿ ಅವಘಡಗಳನ್ನು ತಪ್ಪಿಸಲು ರೈಲ್ವೆ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
 
webdunia
ಕಾವಲು ಮತ್ತು ನಿರ್ಲಕ್ಷ್ಯದ ಸಮಸ್ಯೆ:
ರಾತ್ರಿ ವೇಳೆ ಚಾರ್ಜ್‌ಗೆ ಹಾಕಿ ನಿದ್ರೆ ಮಾಡುವಾಗ ಸಾಧನಗಳಲ್ಲಿ ಶಾರ್ಟ್ ಸರ್ಕ್ಯೂಟ್ ಅಥವಾ ಶಕ್ತಿ ಅಸಮತೋಲನ ಉಂಟಾದರೆ ತಕ್ಷಣ ಗಮನಿಸಲು ಸಾಧ್ಯವಾಗುವುದಿಲ್ಲ. ಇದು ಇಡೀ ಬೋಗಿಯಲ್ಲಿರುವ ಪ್ರಯಾಣಿಕರ ಸುರಕ್ಷತೆಗೆ ಅಪಾಯ ತರಬಹುದು.
 
ಮೊಬೈಲ್ ಕಳವು ತಡೆಗಟ್ಟಲು:
ರಾತ್ರಿಯ ವೇಳೆ ಸಾರ್ವಜನಿಕವಾಗಿ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಮೊಬೈಲ್ ಬಿಟ್ಟು ಮಲಗುವುದರಿಂದ ಕಳ್ಳತನಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ನಿಯಮದಿಂದ ಕಳವು ಪ್ರಕರಣಗಳಿಗೂ ಕಡಿವಾಣ ಬೀಳಲಿದೆ.
 
ರೈಲ್ವೆ ಇಲಾಖೆಯ ಕಟ್ಟುನಿಟ್ಟಿನ ಸೂಚನೆಗಳು
ಸಿಬ್ಬಂದಿಯ ಜವಾಬ್ದಾರಿ: ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಚಾರ್ಜಿಂಗ್ ಪಾಯಿಂಟ್‌ಗಳು ಆಫ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ರೈಲು ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
 
ಅನಿರೀಕ್ಷಿತ ತಪಾಸಣೆ: ನಿಯಮ ಉಲ್ಲಂಘನೆಯಾಗದಂತೆ ತಡೆಯಲು ರೈಲ್ವೆ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಲಿದ್ದಾರೆ. ಸಿಬ್ಬಂದಿ ಕರ್ತವ್ಯದಲ್ಲಿ ಲೋಪವೆಸಗಿದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ.
 
ಪ್ರಯಾಣಿಕರಿಗೆ ಸಲಹೆ: ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸುವವರು ದೀರ್ಘ ದೂರದ ಪ್ರಯಾಣಕ್ಕೂ ಮುನ್ನವೇ ತಮ್ಮ ಮೊಬೈಲ್ ಹಾಗೂ ಗ್ಯಾಜೆಟ್‌ಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳುವುದು ಉತ್ತಮ. ತುರ್ತು ಸಂದರ್ಭಗಳಲ್ಲಿ ಅಥವಾ ರಾತ್ರಿ ವೇಳೆ ಚಾರ್ಜಿಂಗ್ ಸೌಲಭ್ಯ ಸಿಗುವುದಿಲ್ಲವಾದ್ದರಿಂದ ಪವರ್ ಬ್ಯಾಂಕ್‌ಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿಟ್ಟುಕೊಳ್ಳುವುದು ಸೂಕ್ತ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಹೋದ ಹಿಂದೂ ಕಾರ್ಯಕರ್ತನ ಮೇಲೆ ದಾಳಿ: Viral video