ಬೆಂಗಳೂರು: ಇಂದಿನಿಂದ ಬೆಂಗಳೂರಿನ ಬಾನಂಗಳದಲ್ಲಿ ಹಬ್ಬದ ಕಳೆ ಕಟ್ಟಲಿದೆ. 2017 ನೇ ಏರೋ ಇಂಡಿಯಾಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚಾಲನೆ ನೀಡಿದ್ದಾರೆ.
279 ದೇಶೀಯ 279 ವಿದೇಶೀ ಕಂಪನಿಗಳು ಇದರಲ್ಲಿ ಭಾಹಗವಹಿಸಲಿವೆ. ಉದ್ಘಾಟನಾ ಸಮಾರಂಭದಲ್ಲಿ ಸಚಿವ ಆರ್. ವಿ. ದೇಶಪಾಂಡೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ವಾಯುಸೇನೆ ವತಿಯಿಂದ ವಾದ್ಯ ಘೋಷಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಐದು ದಿನಗಳ ಕಾಲ ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಕಲರವ ಕಂಡುಬರಲಿದೆ. ಭಾರತದ ಸೂರ್ಯ ಕಿರಣ ತಂಡಕ್ಕೆ ಇದು 500 ನೇ ವೈಮಾನಿಕ ಪ್ರದರ್ಶನವಾಗಲಿದೆ. ಸಾವಿರಾರು ಜನ ಇದಕ್ಕೆ ಸಾಕ್ಷಿಯಾಗಲಿದ್ದಾರೆ. ವೈಮಾನಿಕ ಪ್ರದರ್ಶನದ ಪ್ರವೇಶ ದರ 600 ರೂ. ಗಳು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ