ಹಳೆಯ 500 ಮತ್ತು 1,000ರೂಪಾಯಿ ನೋಟುಗಳ ವಿನಿಮಯ ಮಾಡಿಕೊಳ್ಳಲು ಬರುವವರಿಗೆ ಬುಧವಾರದಿಂದ ಇಂಕ್ ಹಾಕುವಂತೆ ಕೇಂದ್ರ ಸರ್ಕಾರ ಬ್ಯಾಂಕ್‌ಗಳಿಗೆ ಇಂದು ನಿರ್ದೇಶನ ನೀಡಿದೆ.
ಒಬ್ಬ ವ್ಯಕ್ತಿ ಒಂದು ಬಾರಿಗೆ 4,500 ರೂಪಾಯಿ ಹಣ ವಿನಿಮಯ ಮಾಡಿಕೊಳ್ಳಬಹುದು. ಹೀಗಾಗಿ ಪದೇ ಪದೇ ಹಣ ವಿನಿಮಯ ಮಾಡಿಕೊಳ್ಳಲು ಬರುತ್ತಿರುವುದರಿಂದ ಬ್ಯಾಂಕ್‌ಗಳಲ್ಲಿ ಮತ್ತು ಎಟಿಎಂಗಳಲ್ಲಿ ಸರತಿ ಸಾಲು ಹೆಚ್ಚಾಗಿ ಜನರು ಪರದಾಡುತ್ತಿದ್ದಾರೆ. ಈ ಸಮಸ್ಯೆಗೆ ತಡೆ ಒಡ್ಡಲು ನಿರ್ಧರಿಸುವ ಕೇಂದ್ರ ಈ ಹೊಸ ನಿಯಮವನ್ನು ಜಾರಿಯಲ್ಲಿ ತರುತ್ತಿದೆ.
ಈ ರೀತಿ ಮಾಡುವುದರಿಂದ ಅದೇ ವ್ಯಕ್ತಿ ಮತ್ತೆ ಹಣವಿನಿಮಯ ಮಾಡಿಕೊಳ್ಳಲು, ಹಣ ಪಡೆಯಲು ಬರುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಕೆಲವರು ತಮ್ಮ ಕಪ್ಪುಹಣವನ್ನು ಬಿಳಿ ಹಣವನ್ನಾಗಿಸಿಕೊಳ್ಳಲು ಬಡವರ, ಬಂಧುವರ್ಗದವರ ಖಾತೆಗಳನ್ನು ಬಳಸುತ್ತಿದ್ದಾರೆ. ಈ ಅಕ್ರಮವನ್ನು ತಡೆಯಲು ಜನ್‌ಧನ್ ಖಾತೆಗಳನ್ನು ಪರಿಶೀಲಿಸಲಾಗುತ್ತದೆ ಎಂದಿದ್ದಾರೆ ದಾಸ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ