Publish Date: Sun, 04 Jun 2017 (18:37 IST)
Updated Date: Sun, 04 Jun 2017 (18:38 IST)
ಪಂಜಾಬ್‌ನಲ್ಲಿ ಮೂವರು ಉಗ್ರಗಾಮಿಗಳ ಬಂಧಿಸಿದ ಪೊಲೀಸರು ಭಾರಿ ಸಂಚು ವಿಫಲಗೊಳಿಸಿದ್ದಾರೆ. ಬಂಧಿತ ಉಗ್ರರಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ಉಗ್ರರಿಂದ ಸುಮಾರು 38 ಬಂದೂಕು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ದೇಶದ ಪ್ರಮುಖ ನಗರಗಳ ಮೇಲೆ ಉಗ್ರರ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲ ನೀಡಿರುವ ಬಗ್ಗೆ ವಿಚಾರಣೆಯ ನಂತರ ತಿಳಿದುಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.