Publish Date: Sun, 23 Aug 2026 (11:37 IST)
Updated Date: Sun, 23 Aug 2026 (11:42 IST)
ರೈಲು ಪ್ರಯಾಣದ ವೇಳೆ ನೀಡಲಾಗುವ ಬೆಡ್‌ಶೀಟ್‌ಗಳನ್ನು ಕದ್ದು, ಅದನ್ನು ಶಾಲುಗಳಂತೆ ಹೊದಿಸಿಕೊಂಡ ರೀತಿಯಲ್ಲಿ ಮೂವರು ವ್ಯಕ್ತಿಗಳು ಮಾರ್ಕೆಟ್‌ನಲ್ಲಿ ಕಂಡುಬಂದರು. ಇವರ ವಿಡಿಯೋವನ್ನು ಅಲ್ಲೇ ಇದ್ದವರು ವಿಡಿಯೋ ಮಾಡಿದ್ದಾರೆ.
ಅದಲ್ಲದೆ ಅವರು ಇದು ರೈಲ್ವೆಯಲ್ಲಿ ನೀಡಲಾಗುವ ಬೆಡ್‌ಶೀಟ್‌ಗಳು ಎಂದು ಹೇಳಿದ್ದಾರೆ.
ಭಾರತೀಯ ರೈಲ್ವೆಯ ಬೆಡ್‌ಶೀಟ್‌ಗಳನ್ನು ಶಾಲುಗಳಂತೆ ಧರಿಸಿದ್ದ ಮೂವರು ವ್ಯಕ್ತಿಗಳು ಕಂಡುಬಂದರು.
ಆರ್‌ಟಿಐ ಮಾಹಿತಿಯ ಪ್ರಕಾರ, ಜನವರಿ 2022 ಮತ್ತು ಮೇ 2026 ರ ನಡುವೆ ರೈಲುಗಳಿಂದ 104.51 ಕೋಟಿ ರೂ. ಮೌಲ್ಯದ 1.27 ಕೋಟಿಗೂ ಹೆಚ್ಚು ಬೆಡ್‌ರೋಲ್ ಸಾಮಗ್ರಿಗಳು ಕಳವಾಗಿವೆ.
ಈಗ ಕಠಿಣ ತಪಾಸಣೆ ಮತ್ತು ಬಹುಶಃ ಮರುಪಾವತಿಸಬಹುದಾದ ಸಣ್ಣ ಮೊತ್ತದ 'ಲಿನೆನ್ ಠೇವಣಿ' (ಬೆಡ್‌ಶೀಟ್/ಹೊದಿಕೆಗಾಗಿ ಠೇವಣಿ) ಪದ್ಧತಿಯನ್ನು ಜಾರಿಗೆ ತರುವ ಸಮಯ ಬಂದಿದೆ.
ಸಾರ್ವಜನಿಕ ಆಸ್ತಿಯು ಯಾರದ್ದೂ ಅಲ್ಲದ ಆಸ್ತಿಯಲ್ಲ; ಅದು ನಮ್ಮ ದೇಶದ ಆಸ್ತಿ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ