Select Your Language

Notifications

webdunia
webdunia
webdunia
webdunia

ತ್ರಿವಳಿ ತಲಾಖ್ ರದ್ದುಗೊಳಿಸಿದ ಬಹುಮತದ ತೀರ್ಪು

ತ್ರಿವಳಿ ತಲಾಖ್ ರದ್ದುಗೊಳಿಸಿದ ಬಹುಮತದ ತೀರ್ಪು
ನವದೆಹಲಿ , ಮಂಗಳವಾರ, 22 ಆಗಸ್ಟ್ 2017 (11:10 IST)
ನವದೆಹಲಿ: ತ್ರಿವಳಿ ತಲಾಖ್ ವಿಚಾರಣೆ ನಡೆಸಿದ ಪಂಚ ಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿ ಬಹುಮತದ ತೀರ್ಪು ಪ್ರಕಟವಾಗಿದ್ದು, ತ್ರಿವಳಿ  ತಲಾಖ್ ರದ್ದುಗೊಳಿಸಲಾಗಿದೆ.

 
ಈ ಮೊದಲು ನ್ಯಾ. ಖೆಹರ್ ತಮ್ಮ ತೀರ್ಪು ಓದಿದ್ದರು. ಇದರಲ್ಲಿ ತ್ರಿವಳಿ ತಲಾಖ್ ನ್ನು ಮಾನ್ಯ ಮಾಡಿದ್ದರು. ಆದರೆ ಕಾನೂನಿನ ವ್ಯಾಪ್ತಿಗೆ ತರಬೇಕು ಎಂದಿದ್ದರು.

ಇದೀಗ ಐವರು ನ್ಯಾಯಾಧೀಶರು ಪ್ರತ್ಯೇಕವಾಗಿ ತಮ್ಮ ತೀರ್ಪು ನೀಡಿದ್ದು, ಮೂವರು ನ್ಯಾಯಾಧೀಶರು ತ್ರಿವಳಿ ತಲಾಖ್ ರದ್ದುಗೊಳಿಸಬೇಕೆಂದು ತೀರ್ಪು ನೀಡಿದ್ದಾರೆ. ಹೀಗಾಗಿ ಬಹುಮತದ ಆಧಾರದಲ್ಲಿ ಈ ತೀರ್ಪು ಜಾರಿಗೆ ಬರಲಿದೆ.

ಹಾಗಾಗಿ ಇನ್ನು ಮುಂದೆ, ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನದ ಕುರಿತಾದ ಕಾನೂನನ್ನು ಕೇಂದ್ರ ಸರ್ಕಾರ ಹೊಸದಾಗಿ ಸಂಸತ್ತಿನಲ್ಲಿ ಮಂಡಿಸಿ ಹೊರತರಬೇಕಿದೆ. ಅದರಂತೆ ಆರು ತಿಂಗಳ ನಂತರ ಕೇಂದ್ರ ತರಲಿರುವ ಕಾನೂನು ಜಾರಿಗೆ ಬರಲಿದೆ.

ಇದನ್ನೂ ಓದಿ.. ತ್ರಿವಳಿ ತಲಾಖ್: ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿವಳಿ ತಲಾಖ್: ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿ